Mysore
36
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

Loksabha Election Results 2024: 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಒಕ್ಕೂಟ

ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆಗೂ ಮುನ್ನ ಚುನಾವಣಾ ಎಕ್ಸಿಟ್‌ ಪೋಲ್‌ಗಳು  ಹೊರಬಿದ್ದಿದ್ದವು. ಅದರಲ್ಲಿ ಬಹುತೇಕ ಇಂಡಿಯಾ ಒಕ್ಕೂಟ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳಿದ್ದವು.  ಆದರೆ, ಇಂಡಿಯಾ ಒಕ್ಕೂಟ 228 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಲ್ಲೂ ಕಾಂಗ್ರೆಸ್‌ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಏಕಾಂಗಿಯಾಗಿ  ಮುನ್ನಡೆ ಸಾಧಿಸಿದೆ.  ಈ ಹಿನ್ನಲೆ ಸಮೀಕ್ಷೆಗಳೆಲ್ಲವೂ ಸುಳ್ಳಾಗುತ್ತವಾ ಎಂಬ ಅನುಮಾನ ಶುರುವಾಗಿದೆ.

ಚುನಾವಣೆ ಎಕ್ಸಿಟ್‌ ಪೋಲ್‌ ಬಂದಾಗಿದಂಲೂ ಕಾಂಗ್ರೆಸ್‌ ನಾಯಕರು ನಾವು ಸಮೀಕ್ಷೆಗಳನ್ನು ನಂಬೋಂದಿಲ್ಲ. ನೋಡ್ತಾ ಇರಿ ಫಲಿತಾಂಶ ಬೇರೆ ರೀತಿಯಲ್ಲಿಯೇ ಇರುತ್ತದೆ ಎಂದು ಹೇಳಿದ್ದರು.  ಸದ್ಯ ಪರಿಸ್ಥಿತಿ ನೋಡಿದರೆ ಕಾಂಗ್ರೆಸ್‌ ನಾಯಕರ ಹೇಳಿಕೆಯಂತೆಯೇ ಇವೆ. ಆದರೆ ಇದೇ ಟ್ರೆಂಡ್‌ ಮುಂದುವರಿಯುತ್ತಾ ಅಥವಾ ಹಿನ್ನಡೆ ಸಾಧಿಸುತ್ತಾ ಎಂದು ಹೇಳಲು ಸಾಧ್ಯವಿಲ್ಲ.

ಎನ್‌ಡಿಎ 290 ಕ್ಷೇತ್ರಗಳಲ್ಲಿ ಮತ್ತು ಇಂಡಿಯಾ ಒಕ್ಕೂಟ 228 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

Tags:
error: Content is protected !!