Mysore
23
overcast clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ಪ್ರಧಾನಿ ಮೋದಿಗೆಂದೇ ಮೈಸೂರು ಮಹಾರಾಜರು ಧರಿಸುತ್ತಿದ್ದ ಮಾದರಿಯ ಪೇಟ ತಯಾರು

ಮೈಸೂರು: ಇದೇ ಏಪ್ರಿಲ್.15ರಂದು ನಾಗಮಂಗಲದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

ಅಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರು ಮಹಾರಾಜರ ಮಾದರಿ ಪೇಟವನ್ನು ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಸ್ತ್ರ ವಿನ್ಯಾಸಕ, ಕಲಾವಿದ ನಂದನ್ ಅವರ ಕೈಚಳಕದಲ್ಲಿ ಪೇಟ ಸಿದ್ಧಗೊಂಡಿದ್ದು, ಮಠದ ಭಕ್ತ ವೃಂದ ಮೈಸೂರು ಮಹಾರಾಜರ ಮಾದರಿ ಪೇಟವನ್ನು ಪ್ರಧಾನಿ ಮೋದಿಗೆ ಹಾಕಲಿದೆ.

ಐದು ದಿನಗಳ ನಿರಂತರ ಶ್ರಮದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿ ಪೇಟ ತಯಾರಾಗಿದ್ದು, ಶುದ್ದ ಬನಾರಸ್ ಸಿಲ್ಕ್ ಬಟ್ಟೆ, ಮುತ್ತಿನ ಮಣಿಗಳು, ಗಂಡುಬೇರುಂಡ ಚಿತ್ರ ಬಳಸಿ ಅಚ್ಚುಕಟ್ಟಾಗಿ ತಯಾರಿಸಲಾಗಿದೆ.

ಈ ಹಿಂದೆ ಕಲಾವಿದ ನಂದನ್ ಅವರು ನರೇಂದ್ರ ಮೋದಿ ಅವರಿಗೆ ಕೆಂಪೇಗೌಡ ಪೇಟ ತಯಾರಿಸಿ ಕೊಟ್ಟಿದ್ದರು. ಈಗ ಅವರಿಂದಲೇ ಮೈಸೂರು ಮಹಾರಾಜರ ಪೇಟ ತಯಾರಾಗಿದೆ.

 

Tags:
error: Content is protected !!