Mysore
25
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಫೋನ್‌ಪೇ ಸಿಇಒ ವಿರುದ್ಧ ಸಿಟ್ಟಿಗೆದ್ದ ಕನ್ನಡಿಗರು: ಟ್ರೆಂಡಿಂಗ್‌ ಆಯ್ತು ಅನ್‌ಇನ್ಸ್ಟಾಲ್‌ ಫೋನ್‌ಪೇ!

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕಡ್ಡಾಯ ಮೀಸಲಾತಿ ನೀಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಬೆನ್ನಲ್ಲೇ, ಈ ಘೋಷಣೆಯಲ್ಲಿ ಕಟುವಾಗಿ ಟೀಕಿಸಿದ್ದರು ಫೋನ್‌ಪೇ ಸಿಇಒ ಸಮೀರ್‌ ನಿಗಮ್‌.

ಫೋನ್‌ಪೇ ಸಿಇಒ ಸಮೀರ್‌ ಅವರ ಪೋಸ್ಟ್‌ ಸದ್ಯ ಭಾರೀ ವೈರಲ್‌ ಆಗಿದ್ದು, ಕನ್ನಡಿಗರ ವಿರುದ್ಧ ಟ್ವೀಟ್‌ ಮಾಡಿದ್ದ ಅವರ ಫೋನ್‌ಪೇ ಆಪ್‌ನ್ನು ಮೊಬೈಲ್‌ನಿಂದ ತೆಗೆದುಹಾಕುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ ಕನ್ನಡಿಗರು.

ಕರ್ನಾಟಕ ಎಂದರೇ ಕನ್ನಡ ಮಾತನಾಡುವ ಜನರು ಮಾತ್ರ. ಹಾಗೂ ಅವರು ಮಾತ್ರ ಮೀಸಲಾತಿಯನ್ನು ಪಡೆಯುವುದೇ? ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ನಾನು ಬಯಸುವ ಯಾವುದೇ ಭಾಷೆಯನ್ನು ನಾನು ಕಲಿಯಬಲ್ಲೆ. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆ. ಇದನ್ನು ಸಹಿಸದ ನೀವು ಬೇಕಿದ್ದರೇ ಅಳಬಹುದು ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದರು.

ಇದಕ್ಕೆ ಮತ್ತೊಂದು ಪೋಸ್ಟ್‌ ಮಾಡಿರುವ ನಿಗಮ್‌. ನನಗೆ 46 ವರ್ಷ. 15ಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದೇ ರಾಜ್ಯದಲ್ಲಿ ಎಂದಿಗೂ ವಾಸಿಸಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಅವರಿಗೆ ಹಲವಾರು ಪೋಸ್ಟಿಂಗ್‌ಗಳನ್ನು ನೀಡಲಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?

ನಾನು ಕಂಪನಿಗಳನ್ನು ನಿರ್ಮಿಸುತ್ತೇನೆ. ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಕನ್ನಡಿಗರು ಬೈಕಾಟ್‌ ಫೋನ್‌ಪೇ ಎಂದು ಘೊಷಣೆ ಕೂಗಲು ಆರಂಭಿಸಿದರು. #uninstallphonepe #bycottphonepe ಮೂಲಕ ಕನ್ನಡ ಹಾಗೂ ಕನ್ನಡಿಗರಿಗೆ ಮಾಡಿದ ಅವಮಾನದ ವಿರುದ್ಧ ಅವರು ಕನ್ನಡಿಗರು ತಿರುಗೇಟು ನೀಡಿದ್ದಾರೆ.

https://x.com/appudynasty1/status/1814215661024878888

Tags:
error: Content is protected !!