Mysore
14
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಉಡುಪಿ: ಪತ್ನಿ ಜೊತೆ ಶ್ರೀಕೃಷ್ಣನ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ

ಉಡುಪಿ: ಪತ್ನಿ ಜ್ಯೋತಿ ಜೋಶಿ ಜೊತೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮಿಜಿಯನ್ನು ಭೇಟಿ ಮಾಡಿ, ಮಠದಲ್ಲೇ ಅನ್ನಪ್ರಸಾದ ಸ್ವೀಕರಿಸಿದರು. ಪರ್ಯಾಯ ಪುತ್ತಿಗೆ ಮಠದಿಂದ ಪ್ರಹ್ಲಾದ್‌ ಜೋಶಿಗೆ ಗೌರವ ಸಮರ್ಪಿಸಲಾಯಿತು.

ನಟಿ ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆರೋಪಿಗೆ ಪ್ರೋಟೋಕಾಲ್‌ ವ್ಯವಸ್ಥೆ ಮಾಡಿ ಚೆಕ್ಕಿಂಗ್‌ ಇಲ್ಲದೇ ಬಿಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಚಕಾರ ಎತ್ತುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳ ಪಾತ್ರ ಇದೆ ಎನ್ನುವ ಅನುಮಾನಗಳು ಮೂಡುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಇರಬೇಕು. ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ರೂಪಾಯಿ ಚಿಹ್ನೆ ನಿರಾಕರಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ರಾಷ್ಟ್ರೀಯ ಹಿತಾಶಕ್ತಿಯ ವಿಚಾರ. ಈ ರೀತಿ ಮಾಡಿರುವುದು ಸರಿಯಲ್ಲ. ರೂಪಾಯಿ ಸಿಂಬಲ್‌ ಮೋದಿ ಅಥವಾ ಬಿಜೆಪಿ ಮಾಡಿದ್ದಾ? ಈ ಚಿಹೆಯನ್ನು ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಆದರೂ, ಯಾಕೆ ಈ ತೀರ್ಮಾನ ತೆಗೆದುಕೊಂಡ್ರಿ. ನೀವು ಮಾಡಿದ್ದ ಸಿಂಬಲ್‌ಗೆ ನಮ್ಮದೇನೂ ಅಭ್ಯಂತರವಿರಲಿಲ್ಲ. ಜೊತೆಗೆ ಈ ಡಿಸೈನ್‌ ಮಾಡಿದ್ದು ತಮಿಳುನಾಡಿನವನು. ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಈ ರೀತಿ ಹೇಳಿಕೆ ನೀಡಬೇಡಿ ಎಂದು ಕಿಡಿಕಾರಿದರು.

 

Tags:
error: Content is protected !!