ಕೊಪ್ಪಳ: ಭಾರೀ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.
ಈ ನಡುವೆ ತುಂಗಭದ್ರಾ ಜಲಾಶಯದ 6 ಕ್ರಸ್ಟ್ ಗೇಟ್‌ಗಳು ಬೆಂಡಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ವರ್ಷದ ಹಿಂದೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು.
ಒಂದು ವಾರಗಳ ಕಾಲ ಕಾರ್ಯಾಚರಣೆ ನಡೆಸಿ ಹೊಸ ಗೇಟ್ ಅಳವಡಿಕೆ ಮಾಡಲಾಗಿತ್ತು. ಇದೀಗ ಆರು ಕ್ರಸ್ಟ್ ಗೇಟ್‌ಗಳಲ್ಲಿ ದೋಷ ಕಂಡುಬಂದಿದ್ದು, ಆರು ಗೇಟ್‌ಗಳು ಕೂಡ ಬೆಂಡಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟು 105.788 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದರುವ ಜಲಾಶಯದಲ್ಲಿ ಗೇಟ್‌ಗಳ ನಿರಂತರ ಸಮಸ್ಯೆಯಿಂದಾಗಿ ಈ ಬಾರಿ ಮುಂಗಾರಿನಲ್ಲಿ ಕೇವಲ 80 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ. ಈವರೆಗೆ ಅಂದಾಜು 130 ಟಿಎಂಸಿ ನೀರು ನದಿ ಪಾಲಾಗಿದೆ.



