Mysore
30
scattered clouds

Social Media

ಭಾನುವಾರ, 08 ಫೆಬ್ರವರಿ 2026
Light
Dark

ತಿರುಪತಿ ಲಡ್ಡು ಪ್ರಕರಣ: ತಿರುಮಲ ದೇಗುಲದಲ್ಲಿ ನೆರವೇರಿದ ಶಾಂತಿ ಹೋಮ

ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ದೇವಾಲಯ ಶುದ್ಧೀಕರಣದ ಕುರಿತು ಸಂಪ್ರೋಕ್ಷಣ ಕಾರ್ಯ ಭಾಗವಾಗಿ ಇಂದು ಶಾಂತಿ ಹೋಮವನ್ನು ತಿರುಪತಿ ತಿರುಮಲ ದೇವಸ್ಥಾನ ಏರ್ಪಡಿಸಿತ್ತು.

ಇಂದು ಆಂಧ್ರದ ತಿರುಪತಿ ದೇವಾಲಯದಲ್ಲಿ ಸಂಪ್ರೋಕ್ಷಣ ಶಾಂತಿ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಹೋಮದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಾಮಲಾರಾವ್‌, ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಅನೇಕ ಅರ್ಚಕರು ಭಾಗವಹಿಸಿದ್ದರು.

ದೇವಸ್ಥಾನದಲ್ಲಿ ನಾಲ್ಕು ಗಂಟೆಗಳ ಕಾಲ ಶಾಂತಿ ಹೋಮ ಪಂಚಗವ್ಯ ಪ್ರೊಕ್ಷಣೆ ಶುದ್ದೀಕರಣ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಮೂಲಗಳಿಂದ ತಿಳಿದುಬಂದಿದೆ.

ಆ ಆಚರಣೆಗಳಿಂದ ಕೆಟ್ಟದ್ದನ್ನು ನಿವಾರಿಸುತ್ತದೆ. ಸಾರ್ವಜನಿಕರ ಯೋಗಕ್ಷೇಮದ ಜೊತೆಗೆ ಲಡ್ಡುವಿನ ಪಾವಿತ್ರ್ಯತೆಯನ್ನು ಪುನರ್‌ ಸ್ಥಾಪಿಸುತ್ತದೆ ಎಂದು ಟಿಟಿಡಿ ತಿಳಿಸಿದೆ.

 

 

Tags:
error: Content is protected !!