ಬೆಂಗಳೂರು: ಕ್ವಿಂಟಾಲ್ ಗಟ್ಟಲೇ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗೋವಿಂದಪುರ ಠಾಣೆ ಪೊಲೀಸರು ಇಂದು(ನ.22) ಆರೋಪಿಗಳಾದ ಜಮೀರ್, ರೇಷ್ಮಾ ಹಾಗೂ ಅಚ್ಚು ಬಂಧಿತ ಆರೋಪಿಗಳು. ಈ ಮೂವರು ಬೆಂಗಳೂರಿನ ಎಚ್‌ಬಿಆರ್ ಲೇಔಟ್ ಸಮೀಪದ ಬಳಿ ಗಾಂಜಾ ಸಾಗುತ್ತಿದ್ದರು. ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 3 ಕೋಟಿ ರೂ. ಮೌಲ್ಯದ 318 ಕೆ.ಜಿ. ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಪೊಲೀಸರು ಸಂಪೂರ್ಣವಾಗಿ ಗಾಂಜಾ ನೆಟ್ ವರ್ಕ್‌ವನ್ನು ಭೇದಿಸಿದ್ದಾರೆ. ಈ ಪೈಕಿ ಅಚ್ಚು ಎಂಬಾತ ಕೇರಳದಲ್ಲಿ ಡ್ರಗ್ ಪೆಡ್ಲರ್ ಆಗಿದ್ದ ಎನ್ನಲಾಗಿದೆ.