Mysore
29
overcast clouds

Social Media

ಗುರುವಾರ, 30 ಜುಲೈ 2026
Light
Dark

ಹಾಸನ: ಡೆಂಗ್ಯೂಗೆ 13 ವರ್ಷದ ಬಾಲಕಿ ಬಲಿ

ಹಾಸನ: ರಾಜ್ಯಾದ್ಯಂತ ಡೆಂಗ್ಯೂ ಮಹಾಮಾರಿ ಎಲ್ಲೆಡೆ ವ್ಯಾಪಿಸಿದ್ದು, ಬೆಂಗಳೂರಿನ ಬಳಿಕ ಹಾಸನದಲ್ಲಿ ಡೆಂಗ್ಯೂಗೆ ಮೊದಲ ಬಲಿಯಾಗಿದೆ.

ಅಕ್ಷತಾ ಎಂಬ ಹದಿಮೂರು ವರ್ಷದ ಬಾಲಕಿ ಡೆಂಗ್ಯೂಗೆ ಬಲಿಯಾಗಿದ್ದಾರೆ. ಮೂಲತಃ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿಯ ಪುತ್ರಿಯಾಗಿದ್ದಾರೆ.

ಹಾಸನದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿ ಬುಧವಾರ ಜ್ವರಕ್ಕೆ ತುತ್ತಾಗಿ ಬೊಮ್ಮನಾಯಕನಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಆಕೆಯನ್ನು ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಿದ್ದರೂ ಯಾವುದೇ ಚೇತರಿಕೆ ಕಾಣದ ಅಕ್ಷತಾ ಡೆಂಗ್ಯೂಗೆ ಬಲಿಯಾಗಿದ್ದಾರೆ.

Tags:
error: Content is protected !!