ಬೆಂಗಳೂರು: ಸಿಡಿ ಫ್ಯಾಕ್ಟರಿ ಇದ್ದಿದ್ದೇ ಹೊಳೆನರಸೀಪುರದಲ್ಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಯಾರು ಮ್ಯಾನಿಫ್ಯಾಕ್ಚರ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಸನದಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಎಲ್ಲೂ ನಡೆಯದಂತಹ ಕೆಟ್ಟ ಘಟನೆ. ನಿಮ್ಮ ಹುಡುಗನೇ ಮಾಡಿರುವ ಕೃತ್ಯ. ಜೈಲು ಸೇರಿರುವುದು ಎಲ್ಲರಿಗೂ ಗೊತ್ತಿದೆ. ಹಾಸನದ ಘಟನೆ ಬಗ್ಗೆ ವಿಷಾಧವನ್ನೂ ವ್ಯಕ್ತಪಡಿಸದವರು ಇಂದು ರಾಜಕೀಯಕ್ಕಾಗಿ ಬೇರೆಯವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಚ್‌ಡಿಕೆಯವರು ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಲಿ. ನಿಮ್ಮದೇನಿದೆ ಅದನ್ನು ನೋಡಿಕೊಳ್ಳಿ ಎಂದು ಗುಡುಗಿದ್ದಾರೆ.





