ಬೆಂಗಳೂರು: ಅಖಿಲ ಕರ್ನಾಟಕ ಅರ್ಚಕರ ಸಂಘ ತಿರುಪತಿ ಲಡ್ಡು ಪ್ರಸಾದವನ್ನು ರಾಜ್ಯದಲ್ಲಿ ಬಳಕೆ ಮಾಡದಿರುವಂತೆ ತೀರ್ಮಾನಿಸಿದೆ ಎಂದು ಹೇಳಿದೆ.
ಆಂಧ್ರದ ತಿರುಪತಿ ಲಡ್ಡು ಪ್ರಸಾದದಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂಬ ಸ್ಪಷ್ಟತೆ ಸಿಗಬೇಕು. ಅಲ್ಲಿಯವರೆಗೂ ರಾಜ್ಯದಲ್ಲಿ ಲಡ್ಡು ಪ್ರಸಾದವನ್ನು ಬಳಸುವುದಿಲ್ಲ ಎಂಬ ನಿರ್ಧಾರ ಬಗ್ಗೆ ಸ್ಪಷ್ಟತೆ ನೀಡಿದೆ. ರಾಜ್ಯದ ಮುಜರಾಯಿ ಇಲಾಖೆಯ ಎ ಹಾಗೂ ಬಿ ದೇಗುಲಗಳಲ್ಲಿ ನಡೆಯುವ ಕಲ್ಯಾಣೋತ್ಸವಗಳಲ್ಲಿ, ಗೃಹಪ್ರವೇಶ, ಮದುವೆ ಮತ್ತು ಉಪನಯನ ಕಾರ್ಯಕ್ರಮಗಳಲ್ಲಿ ಲಡ್ಡು ಪ್ರಸಾದವನ್ನು ಬಳಸಲಾಗುತ್ತಿತ್ತು. ಆದರೆ ಈಗ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಲಡ್ಡು ಪ್ರಸಾದದಲ್ಲಿ ಸ್ಪಷ್ಟತೆ ಸಿಗುವರೆಗೂ ರಾಜ್ಯದಲ್ಲಿ ಈ ಪ್ರಸಾದವನ್ನು ಮುಂದಿನ ದಿನಗಳಲ್ಲಿ ಬಳಸದಂತೆ ನಿರ್ಧರಿಸಿದೆ ಎಂದು ನಿರ್ಧಾರ ಮಾಡಿದೆ.





