ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನನ್ನ ನೋಡಲು ಇಂದು ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿದ್ದರು.
ದರ್ಶನ್ ಜೈಲು ಸೇರಿದ ಬಳಿಕ ಮೊದಲ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ರನ್ನ ತರುಣ್ ಸುಧೀರ್ ಭೇಟಿ ಮಾಡಿ, ತಮ್ಮ ಮದುವೆಯ ಆಮಂತ್ರಣವನ್ನು ದರ್ಶನ್ ಗೆ ನೀಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ ೧೦ ಮತ್ತು ೧೧ ರಂದು ನಟಿ ಸೋನಲ್ ಮೊಂತೇರೋ ಜೊತೆಗೆ ತರುಣ್ ವಿವಾಹವಾಗುತ್ತಿದ್ದಾರೆ. ದರ್ಶನ್ ಜೈಲಿನಲ್ಲಿರುವ ಕಾರಣ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಯೋಚಿಸಿದ್ದರು. ಆದರೆ ಹಿರಿಯರು ಹಾಗೂ ದರ್ಶನ್ ಸಲಹೆ ಮೇರೆಗೆ ಮದುವೆಗೆ ಮುಂದಾಗಿದ್ದಾರೆ. ಹೀಗಾಗಿ ದರ್ಶನ್ ರನ್ನ ಭೇಟಿ ಮಾಡಿ ಅವರ ಕ್ಷೇಮ ವಿಚಾರಿಸಿ ಮದುವೆ ವಿಚಾರ ತಿಳಿಸಿದ್ದಾರೆ.
ಇತ್ತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ನಟ ದರ್ಶನ್ ನನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ.