ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಸಹಾಯವಿಲ್ಲದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲಾರರು ಎಂದು ಕಾಂಗ್ರೆಸ್ ವ್ಯಂಗವಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಪ್ರಧಾನಿ ಅವರ ದೆಹಲಿ ಚುನಾವಣಾ ಪ್ರಚಾರ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡಿರುವ ಕಾಂಗ್ರೆಸ್, ವಿದೇಶಿ ಭಾಷಣ ಅಥವಾ ದೇಶಿಯ ಸಾರ್ವಜನಿಕ ಭಾಷಣಗಳಲ್ಲಿ ಮೋದಿ ಅವರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಶಬ್ದವು ಬರುವುದಿಲ್ಲ ಎಂದು ಕುಹಕವಾಡಿದೆ.
ದೆಹಲಿಯ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಮೋದಿ ಸ್ವಲ್ಪ ಸಮಯ ಮಾತನಾಡದೇ ಸುಮ್ಮನೇ ಇದ್ದರು. ಆ ಸಮಯದ ಮೌನವ್ರತ ವಹಿಸಿದ್ದರು. ಯಾಕೆಂದರೆ ಅವರ ಒಳಗಡೆ ಏನು ಇಲ್ಲ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.





