Mysore
27
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಡಿ.ಕೆ ಸುರೇಶ್ ಸೇರಿ ಮೂವರು ಕಾಂಗ್ರೆಸ್ ಸಂಸದರ ಅಮಾನತ್ತು

ನವದೆಹಲಿ:  ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಸೇರಿ ಲೋಕಸಭೆಯಿಂದ ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನ ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ.

145 ಸಂಸದರ ಅಮಾನತಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಬಿಕ್ಕಟ್ಟು ಗುರುವಾರವೂ ಮುಂದುವರೆದಿದ್ದು, ಬಿಜೆಪಿ ನಾಯಕರು ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಏತನ್ಮಧ್ಯೆ, ಲೋಕಸಭೆಯೊಳಗೆ, ಸ್ಪೀಕರ್ ಓಂ ಬಿರ್ಲಾ ಅವರು ಇನ್ನೂ ಮೂವರು ಕಾಂಗ್ರೆಸ್ ಸಂಸದರಿಗೆ “ಅಶಿಸ್ತಿನ ನಡವಳಿಕೆ” ವಿರುದ್ಧ ಎಚ್ಚರಿಕೆ ನೀಡಿದರು. ಅದೇ ನಡುವಳಿಕೆ ಮುಂದುವರೆಸಿದ್ದರಿಂದ ಅವ್ರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಯಿತು.

ಈ ಮೂಲಕ ಉಭಯ ಸದನಗಳಿಂದ ಅಮಾನತುಗೊಂಡ ಸದಸ್ಯರ ಸಂಖ್ಯೆ 146ಕ್ಕೆ ತಲುಪಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!