Mysore
27
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಅಭಿವೃದ್ಧಿ ಕುರಿತಾದ ಹೇಳಿಕೆ: ಹೆಚ್‌ಡಿಕೆಗೆ ಟಾಂಗ್‌ ಕೊಟ್ಟ ಡಿಸಿಎಂ

ರಾಮನಗರ: ನಿಮ್ಮ ಅವಧಿಯಲ್ಲಿ ರಾಜ್ಯದ ಅಭಿವೃದ್ದಿಗೆ ಏನು ಮಾಡಿದ್ದೀಯಾ ಮೊದಲು ಹೇಳಪ್ಪ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಅಭಿವೃದ್ದಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್‌ ಟಾಂಗ್‌ ಕೊಟ್ಟಿದ್ದಾರೆ.

ನಗರದಲ್ಲಿ ಇಂದು ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಪಕ್ಷ ಸತ್ತು ಹೋಗಿದೆ ಸರಿ, ನಿನ್ನ ಅವಧಿಯಲ್ಲಿ ಏನು ಮಾಡಿದ್ದೀಯಾ? ಹೇಳಪ್ಪ. ನಾವು ಸಹಕಾರ ಕೊಡ್ತೇವೆ ನೀವು ರಾಜಕೀಯ ಮಾಡ್ತೀಯಾ ಎಂದು ಆರೋಪಿಸಿದರು.

ನಿನಗೆ ರಾಜಕಾರಣವೇ ಮುಖ್ಯ ಹೊರತು ಅಭಿವೃದ್ದಿಯಲ್ಲ. ಒಂದು ದಿನದಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿ ಒಪ್ಪಿಗೆ ಸೂಚಿಸುತ್ತೇನೆ ಎಂದು ಹೇಳಿದೆ. ಆದರೆ, ಯಾಕೆ ಮಾಡಲಿಲ್ಲ. ರಾಜಕೀಯದಲ್ಲಿ ಯಾರು ಶಾಶ್ವತ ಅಲ್ಲ, ಎಲ್ಲರೂ ನೆಲಕಚ್ಚಿದ್ದಾರೆ ಎಂದು ಏಕವಚನದಲ್ಲೇ ಗುಡುಗಿದರು.

Tags:
error: Content is protected !!