ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದು ಅಸಮಾಧಾನಗೊಂಡು ಮಾಜಿ ಸಚಿವ ಶ್ರೀ ರಾಮುಲು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಉಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಸ್ವತಃ ಶ್ರೀರಾಮುಲು ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ಸಿಗರು ನನ್ನನ್ನು ಗೌರವದಿಂದ ಕಂಡಿದ್ದಾರೆ. ನಾನು ಒಳ್ಳೆಯವನಾಗಿರುವುದಕ್ಕೆ ನನ್ನ ಮೇಲೆ ಗೌರವವಿಟ್ಟು ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ. ನನ್ನನ್ನು ಗೌರವಿಸಿದ ಕಾಂಗ್ರೆಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಮಾಧ್ಯಮದ ಮೂಲಕ ಕಾಂಗ್ರೆಸ್ ಪಕ್ಷದವರು ಬಹಿರಂಗವಾಗಿ ಕರೆಯುತ್ತಿದ್ದಾರೆ. ಆದರೆ ಯಾರೇ ಕರೆದರೂ ಹೋಗಲು ನನ್ನ ಮನಸ್ಥಿತಿ ಇರಬೇಕು. ಬಿಜೆಪಿ ನನ್ನ ತಾಯಿ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಏನೇ ಮಾಡಬೇಕಿದ್ದರೂ ನಿಮ್ಮ ಒಪ್ಪಿಗೆಯ ಮೂಲಕವೇ ಮಾಡುತ್ತೇನೆ ಎಂದು ತಿಳಿಸಿದರು.