Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಶ್ರೀ ರಾಮನವಮಿ| ದೇಶದ ಜನತೆಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ/ಬೆಂಗಳೂರು: ಭಾರತದೆಲ್ಲೆಡೆ ಇಂದು ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಶ್ರೀ ರಾಮನವಮಿಯ ಶುಭಾಶಯ ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ದೇಶವಾಸಿಗಳಿಗೆ ರಾಮನವವಮಿ ಹಬ್ಬದ ಶುಭಾಶಯಗಳು. ಈ ಹಬ್ಬವು ಧರ್ಮ, ನ್ಯಾಯ ಹಾಗೂ ಕರ್ತವ್ಯದ ಸಂದೇಶವನ್ನು ನೀಡುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ತ್ಯಾಗ, ಬದ್ಧತೆ ಸಾಮರಸ್ಯ ಮತ್ತು ಶೌರ್ಯದಂತ ಉನ್ನತ ಆದರ್ಶಗಳನ್ನು ಮಾನವ ಕುಲಕ್ಕೆ ತೋರಿಸಿಕೊಟ್ಟಿದ್ದಾರೆ. ಈ ಶುಭ ವೇಳೆಯಲ್ಲ ಎಲ್ಲಾ ದೇಶವಾಸಿಗಳು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಒಂದಾಗಿ ಕೆಲಸ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳೆಬೇಕೆಂದು ನಾನು ಬಯಸುತ್ತೇನೆ ಎಂದು ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ದೇಶದ ಸಮಸ್ತ ಜನತೆಗೆ ಶ್ರೀ ರಾಮನವಮಿ ಶುಭಾಶಯಗಳು. ಭಗವಾನ್‌ ಶ್ರೀ ರಾಮನವರ ಜನ್ಮ ದಿನಾಚರಣೆಯ ಈ ಪವಿತ್ರ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಹೊಸ ಪ್ರಜ್ಞೆ ಹಾಗೂ ಉತ್ಸವವನ್ನು. ಅದು ಬಲಿಷ್ಠ ಸಮೃದ್ಧ ಹಾಗೂ ಸಮರ್ಥ ಭಾರತದ ಸಂಕಲ್ಪಕ್ಕೆ ನಿರಂತರವಾಗಿ ಹೊಸ ಶಕ್ತಿಯನ್ನು ಒದಗಿಸಲಿ ಜೈ ಶ್ರೀರಾಮ್‌ ಎಂದು ಶುಭ ಕೋರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ

ಎಲ್ಲಾ ದೇಶವಾಸಿಗಳಿಗೆ ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು. ಈ ಶುಭ ವೇಳೆಯಲ್ಲಿ ನಾವು ನಮ್ಮ ಜೀವನದಲ್ಲಿ ಸತ್ಯ, ನೈತಿಕತೆ, ತ್ಯಾಗ, ಘನತೆ, ನಿಷ್ಠೆ, ನೀತಿಶಾಸ್ತ್ರ, ಸೇವೆ ನ್ಯಾಯ ಮತ್ತು ಕರುಣೆಯ ಶ್ರೇಷ್ಠ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕು ಎಂದು ಶುಭಾಶಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ – ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ. ಪಾನಕ – ಕೋಸಂಬರಿಯ ಜೊತೆ ಸ್ನೇಹ – ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ.
ಸರ್ವರಿಗೂ ರಾಮನವಮಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವಸತ್ಯ, ತ್ಯಾಗ, ಧೈರ್ಯ, ಮತ್ತು ದಯೆಯ ಮೂರ್ತಿಯಾದ ಶ್ರೀರಾಮ, ಧರ್ಮಸ್ಥಾಪನೆಯ ಸಂಕೇತ. ರಾಮನ ಆದರ್ಶಗಳು ನಮ್ಮ ಜೀವನಕ್ಕೆ ಪ್ರೇರಣೆ, ಅವರ ಹಾದಿ ನಾವು ಅನುಸರಿಸಬೇಕಾದ ದಾರಿ. ರಾಮನವಮಿ ಕೇವಲ ಹಬ್ಬವಲ್ಲ. ನಮ್ಮ ಆತ್ಮದಲ್ಲಿ ರಾಮನ ಮೌಲ್ಯಗಳನ್ನು ನೆಲೆನಿಲ್ಲಿಸುವ ದಿನ. ಸರ್ವರಿಗೂ ರಾಮನವಮಿಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಆರ್‌.ಅಶೋಕ್‌

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು, ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು.

|| ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ|
ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||

ರಾಮನ ಆದರ್ಶ, ತ್ಯಾಗ, ಗುಣ ಎಲ್ಲರಿಗೂ ಸದಾ ಆದರ್ಶಪ್ರಾಯವಾಗಲಿ ಎಂದು ಶುಭ ಕೋರಿದ್ದಾರೆ.

ಬಿ.ವೈ.ವಿಜಯೇಂದ್ರ

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಭಾರತೀಯ ಸಂಸ್ಕೃತಿಯ ಪ್ರತೀಕ, ಆದರ್ಶಯುತ ಆಡಳಿತ, ಪರಿಶುದ್ಧತೆ, ಸಮಾನತೆ, ಸಹೃದಯತೆ, ವೈಚಾರಿಕತೆ, ಸಹಿಷ್ಣುತೆ, ಸರಳತೆ, ಕೌಶಲ್ಯತೆ, ಇವೆಲ್ಲವುಗಳ ಸಂಗಮ ವ್ಯಕ್ತಿತ್ವವೇ ಪ್ರಭು ಶ್ರೀ ರಾಮಚಂದ್ರ’.

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು ನಾಡಿನೆಲ್ಲೆಡೆ ಸುಖ, ಶಾಂತಿ, ಸಂತೋಷ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸೋಣ ಎಂದು ಶುಭ ಕೋರಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಜೈ ಶ್ರೀರಾಮ್ , ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರ ಪ್ರಭುವಿನ ಅನುಗ್ರಹ ಪ್ರತಿಯೊಬ್ಬರಿಗೂ ಇರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭಾಶಯಗಳನ್ನು ಕೋರಿದ್ದಾರೆ.

ಸಂಸದ ಯದುವೀರ್‌ ಕೃಷ್ಣದತ್ತ ಚಾಮಾಜ ಒಡೆಯರ್‌

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮಾಜ ಒಡೆಯರ್‌ ಅವರು, ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ರಾಮಚಂದ್ರ ಪ್ರಭವೂ ಸರ್ವರಿಗೂ ಆಯಸ್ಸು ಆರೋಗ್ಯ ಕೊಟ್ಟು ಸರ್ವ ಸಂಕಷ್ಟಗಳನ್ನೂ ದೂರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿದ್ದಾರೆ.

Tags:
error: Content is protected !!