ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವ ಕಿಡಿಗೇಡಿಗಳಿಗೆ ರೈಲ್ವೆ ಇಲಾಖೆ ದಂಡದ ಬಿಸಿ ಮುಟ್ಟಿಸಿದೆ. ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಒಟ್ಟು 6,27,014 ಜನರಿಂದ ನೈಋತ್ಯ ರೈಲ್ವೆ ಬರೋಬ್ಬರಿ 46.31 ಕೋಟಿ ದಂಡವನ್ನು ವಸೂಲಿ ಮಾಡಿದೆ.
ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದಂಡ ಸಂಗ್ರಹಣೆಯಲ್ಲಿ ಶೇ. 9.95ರಷ್ಟು ಏರಿಕೆ ಕಂಡುಬಂದಿದೆ. ಡಿಸೆಂಬರ್ ತಿಂಗಳೊಂದರಲ್ಲಿಯೇ 72,041 ಪ್ರಕರಣಗಳಿದ್ದು, 5.13 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ. ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಹಾಗೂ ಇವುಗಳಿಂದ ವಸೂಲಿಯಾದ ದಂಡದ ಮೊತ್ತವೆಷ್ಟು ಎಂಬ ಮಾಹಿತಿ ಈ ಕೆಳಕಂಡಂತಿದೆ.
ಬೆಂಗಳೂರು ವಿಭಾಗ: ಪ್ರಕರಣಗಳು – 3,68,205 ಹಾಗೂ ವಸೂಲಿಯಾದ ದಂಡ – 28.26 ಕೋಟಿ
ಹುಬ್ಬಳ್ಳಿ ವಿಭಾಗ: ಪ್ರಕರಣಗಳು – 96790 ಹಾಗೂ ವಸೂಲಿಯಾದ ದಂಡ – 6.36 ಕೋಟಿ
ಮೈಸೂರು ವಿಭಾಗ: ಪ್ರಕರಣಗಳು – 1,00,538 ಹಾಗೂ ವಸೂಲಿಯಾದ ದಂಡ – 5.91 ಕೋಟಿ
ಫ್ಲೈಯಿಂಗ್ ಸ್ಕ್ವಾಡ್: ಪ್ರಕರಣಗಳು – 61,481 ಹಾಗೂ ವಸೂಲಿಯಾದ ದಂಡ – 5.77 ಕೋಟಿ