Mysore
18
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಎಂಎಲ್‌ಸಿ ರಾಜೇಂದ್ರ ರಾಜಣ್ಣ ಹತ್ಯೆಗೆ ಸ್ಕೆಚ್‌: ಓರ್ವ ಮಹಿಳೆ ಪೊಲೀಸ್‌ ವಶಕ್ಕೆ

ಬೆಂಗಳೂರು: ಎಂಎಲ್‌ಸಿ ರಾಜೇಂದ್ರ ರಾಜಣ್ಣ ಹತ್ಯೆಗೆ ಸ್ಕೆಚ್ ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ ವೈರಲ್‌ ಆಗುತ್ತಿದ್ದಂತೆ ಸೋಮನ ಆಪ್ತೆ ಪುಷ್ಪಾ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ ರಾಜೇಂದ್ರರವರ ಹತ್ಯೆಗೆ ಸುಫಾರಿ ನೀಡಿದ ವಿಚಾರದ ಬಗ್ಗೆ ಆಡಿಯೋನಲ್ಲಿ ಕೇಳಿ ಬಂದಿರುವ ಪುಷ್ಪಾ ಎಂಬ ಮಹಿಳೆ ಸ್ಪೋಟಕ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ. ಈ ಹಿನ್ನೆಲೆ ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಹುಟ್ಟುಹಬ್ಬದ ಡೆಕೋರೇಷನ್‌ಗಾಗಿ ಇಬ್ಬರು ಯುವಕರು ಬಂದಿದ್ದರು. ಆ ಇಬ್ಬರು ಯುವಕರನ್ನು ಕಳುಹಿಸಿದ್ದು, ಆಗಲೇ ಹತ್ಯೆಗೆ ಪ್ರಯತ್ನ ನಡೆದಿತ್ತು ಎಂದು ಆಡಿಯೋದಲ್ಲಿ ಪುಷ್ಪಾ ಎಂಬಾಕೆ ಮಾಹಿತಿ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಅವರ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಅಲ್ಲದೇ ಅವರ ಸೋಮ, ಭರತ್‌, ಗುಂಡ, ಯತೀಶ್‌ ಹಾಗೂ ಅಮಿತ್‌ ಎಂಬುವವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Tags:
error: Content is protected !!