ಹಾಸನ: ಅತ್ಯಾಚಾರ, ಪೆನ್‌ಡ್ರೈವ್ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ (ವಿಶೇಷ ತನಿಖಾ ದಳ) ಸ್ಥಳ ಮಹಜರಿಗಾಗಿ ಹೋಳೆನರಸೀಪುರದ ಚೆನ್ನಾಂಬಿಕ ನಿವಾಸಕ್ಕೆ ಇಂದು (ಜೂನ್.8) ಮದ್ಯಾಹ್ನ ಕೆರೆತಂದಿದ್ದಾರೆ.
ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್‌ನ್ನು ಯಾವುದೇ ಕ್ಯಾಮರಾಗಳಿಗೂ ಕಾಣದಂತೆ ಎಸ್‌ಐಟಿ ಅಧಿಕಾರಿಗಳು ಹೊಳೆ ನರಸೀಪುರಕ್ಕೆ ಕರೆತಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚೆನ್ನಾಂಬಿಕಾ ನಿವಾಸದ ಸುತ್ತಾ ಹಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜ್ವಲ್ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಘಟನೆ ನಡೆದ ಸ್ಥಳಗಳ ಮಹಜರಿಗಾಗಿ ಅವರನ್ನು ಜಿಲ್ಲೆಗೆ ಕರೆತಂದಿದ್ದು, ಅವರ ಹೊಳೆ ನರಸೀಪುರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಅವರನ್ನು ಹಾಸನಕ್ಕೆ ಕರೆದೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.