Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸರ್‌, ನನ್ನ ಟೈಂ, ಗ್ರಹಚಾರ ಸರಿಯಿಲ್ಲ ಅಷ್ಟೇ: ದರ್ಶನ್‌ ಭಾವುಕ

ಬೆಂಗಳೂರು: ಸರ್‌, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ….. ಇದು ನಟ ದರ್ಶನ್‌ ಆಡಿರುವ ಪಶ್ಚಾತ್ತಾಪದ ಮಾತುಗಳು.

ನಿನ್ನೆ(ಆ.29) ಆರೋಪಿ ನಟ ದರ್ಶನ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸ್‌ ವ್ಯಾನ್‌ನಲ್ಲಿ ಬಳ್ಳಾರಿಗೆ ತೆರಳುವ ಐದು ಗಂಟೆಗಳ ಪ್ರಯಾಣದಲ್ಲಿ ತನ್ನ ಸಿನಿ ಜರ್ನಿ ಬಗ್ಗೆ ಪೊಲೀಸರ ಜೊತೆ ದರ್ಶನ್‌ ಮಾತನಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ನಟ ದರ್ಶನ್‌ ಭಾವುಕರಾಗಿದ್ದರು ಎಂದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಬಗ್ಗೆ ಈಗ ಮಾತನಾಡಿದ್ರೆ ತಪ್ಪಾಗುತ್ತೆ. ಕಾನೂನಿನ ಮೂಲಕ ಎಲ್ಲವನ್ನು ಎದುರಿಸುತ್ತೇನೆ ಎಂಬುದಾಗಿ ದರ್ಶನ್‌ ಮಾತನಾಡಿದ್ದಾರೆ.

ನಿನ್ನೆಯ ಐದು ಗಂಟೆಗಳ ಕಾಲ ಪ್ರಯಾಣದಲ್ಲಿ ಕೆಲ ವಿಚಾರವನ್ನು ಹೊರತು ಪಡಿಸಿ ಹೆಚ್ಚಿನ ಸಮಯ ದರ್ಶನ್‌ ಮೌನವಾಗಿಯೇ ಕುಳಿತಿದ್ದರಂತೆ.

Tags: