Mysore
27
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ತಾವೇ ಅಧಿಕಾರ ದುರುಪಯೋಗ ಮಾಡಿಕೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗುವುದು ಹಾಸ್ಯಾಸ್ಪದ ; ಎಚ್ ಡಿಕೆ

ಬೆಂಗಳೂರು : ತಾವೇ ಅಧಿಕಾರ ದುರುಪಯೋಗ ಮಾಡಿಕೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗುವುದು ಹಾಸ್ಯಾಸ್ಪದ ಎನಿಸುತ್ತದೆ. ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕೆ ಖಂಡಿತ ಇಲ್ಲ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಕೇಂದ್ರೀಯ ತನಿಖಾ ದಳಗಳಾಗಿರುವ ಸಿಬಿಐ ಮತ್ತುಇಡಿ ವಾಲ್ಮೀಕಿ ನಿಗಮ ಹಗರಣವನ್ನು ತನಿಖೆ ನಡೆಸುತ್ತಿರುವುದನ್ನ ಮತ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರು ನಾಗೇಂದ್ರ ಮೇಲೆ ತನಿಖಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಸಿದ್ದರಾಮಯ್ಯ ಸರ್ಕಾರ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಎಚ್‌ ಡಿಕೆ, ಯಾವನೋ ಒಬ್ಬ ಎಂಡಿ ಕೈಯಲ್ಲಿ ಇಡಿ ವಿರುದ್ಧ ದೂರು ಕೊಡಿಸಿ FIR ಮಾಡಿಸಿದ್ದಾರೆ. ಸರ್ಕಾರದ ಕ್ರಿಮಿನಲ್‌ ಮೈಂಡ್‌ ಸೆಟ್‌ ತನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ.  ತಾವೇ ಅಧಿಕಾರ ದುರುಪಯೋಗ ಮಾಡಿಕೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗುವುದು ಹಾಸ್ಯಾಸ್ಪದ ಎನಿಸುತ್ತದೆ. ಪ್ರತಿಭಟನೆ ನಡೆಸುವ ನೈತಿಕತೆ ಅವರಿಗೆ ಖಂಡಿತ ಇಲ್ಲ. ದೇವೇಗೌಡರ ಕುಟುಂಬ ನಾಶ ಮಾಡುವುದಕ್ಕೋಸ್ಕರ ವಕೀಲ ದೇವರಾಜೇಗೌಡ ನಿರಾಕರಿಸಿದಾಗ ಅವರ ವಿರುದ್ಧ ಸುಳ್ಳು ಕೇಸ್‌ ಹಾಕಿಸಿ ಅರೆಸ್ಟ್‌ ಮಾಡಿಸಿದ್ದು, ಎಲ್ಲಾ ಗೊತ್ತಿದೆ. ಇಂಥ ಸರ್ಕಾರಕ್ಕೆ ಅಧಿಕಾರ ದುರುಪಯೋಗದ ಬಗ್ಗೆ ಧರಣಿ ನಡೆಸುವ ನೈತಿಕತೆ ಇದೆಯೇ ಎಂದು ಖಾರವಾಗಿ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

Tags:
error: Content is protected !!