Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಡಿ.ಕೆ ಸುರೇಶ್ ಸೋಲಿಸಿದ್ದೇ ಸಿದ್ದರಾಮಯ್ಯ : ಆರ್ ಅಶೋಕ್ ಹೊಸ ಬಾಂಬ್

ಕೋಲಾರ : ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಸುರೇಶ್​ ಸೋಲಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೊಸ ಬಾಂಬ್ ಸಿಡಿಸಿದ್ದಾರೆ.

ಕೋಲಾರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಆರ್‌ ಅಶೋಕ್, ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಿಕೆಶಿಯವರ ಬಲ ಕುಗ್ಗಿಸಲು ಡಾ.ಜಿ.ಪರಮೇಶ್ವರ್​ ರೀತಿಯಲ್ಲೇ ಡಿ.ಕೆ.ಸುರೇಶ್​ ಅವರನ್ನು ಸೋಲಿಸಲಾಗಿದೆ. ಡಿ.ಕೆ ಶಿವಕುಮಾರ್​ ಸಿಎಂ ಸ್ಥಾನ ಕೇಳುತ್ತಾರೆ ಎಂದು ಡಿ.ಕೆ.ಸುರೇಶ್​ ಸೋಲಿಸಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಚದುರಂಗದಾಟ ಶುರು ಮಾಡಿದ್ದಾರೆ. ಹೀಗಾಗಿಯೇ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಬಾಯಲ್ಲಿ ಸಿಎಂ ಸ್ಥಾನದ ವಿಚಾರ ಹೇಳಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

Tags: