ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ-ನಿಮ್ಹಾನ್ಸ್ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸತೆಗಳಲ್ಲಿ ಆಘಾತಕಾರಿ ಬೆಳಕಿಗೆ ಬಂದಿದೆ. ಈ ಎರಡೂ ಆಸ್ಪತ್ರೆಗಳಲ್ಲಿ ಕೌನ್ಸಲಿಂಗ್ ಹಾಗೂ ಚಿಕಿತ್ಸೆಗೆಂದು ಬಂದಿದ್ದ ಸುಮಾರು 55 ರೋಗಿಗಳು ನಾಪತ್ತೆಯಾಗಿದ್ದಾರೆ.
ನಿಮ್ಹಾನ್ಸ್ ಹಾಗೂ ಕಿದ್ವಾಯಿ ಆಸ್ಪತ್ರೆಗಳಲ್ಲಿ ಕಳೆದ 20 ತಿಂಗಳಿನಲ್ಲಿ ಸಮಾಲೋಚನ್ ಹಾಗೂ ಚಿಕಿತ್ಸೆಗೆ ಬಂದಿದ್ದ 55 ರೋಗಿಗಳು ನಾಪತ್ತೆಯಾಗಿದ್ದಾರೆ. ಈ ಪೈಕಿ ಮೂವರು ರೋಗಿಗಳ ಸುಳಿವು ಈವರೆಗೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಹೆಚ್ಚಿನ ರೋಗಿಗಳು 2024ರ ಜನವರಿ.1ರಿಂದ 2025ರ ಆಗಸ್ಟ್.14ರ ಅವಧಿಯಲ್ಲಿ ನಾಪತ್ತೆಯಾಗಿದ್ದು, ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ರೋಗಿಗಳ ಪೋಷಕರು ಬಿಲ್‌ಗಳನ್ನು ಪಾವತಿಸುವಾಗ, ಔಷಧಗಳನ್ನು ಖರೀದಿಸುವಾಗ, ಫೀನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರ ರೋಗಿಗಳ ವಿಭಾಗದಲ್ಲಿ ಇತರರೊಂದಿಗೆ ಅನುಭವ ಹಂಚಿಕೊಳ್ಳುತ್ತಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.





