ಬೆಂಗಳೂರು: ಸತತ ಎರಡು ಬಾರಿ ಪರೀಕ್ಷಾ ಫಲಿತಾಂಶ ನೋಡಿದ್ದು, ಅದರಲ್ಲಿ ತೃಪ್ತಿ ಹೊಂದದ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶ ಸಿಕ್ಕಿದ್ದು, ಅದರಲ್ಲಿ ತೇರ್ಗಡೆ ಹೊಂದಿದ ಅಥವಾ ಹೆಚ್ಚು ಅಂಕ ಗಳಿಸಲು ಕಾಯುತ್ತಿದ್ದ ವಿದ್ಯಾರ್ಥಿಗಳ ಭವಿಷ್ಯ ಇಂದು ನಿರ್ಧಾರಗೊಳ್ಳಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ (ಜು.16) ಮದ್ಯಾಹ್ನ ಮೂರು ಗಂಟೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಲಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಈ ಸಂಬಂಧ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಮೌಲ್ಯನಿರ್ಣಯ ಮಂಡಳಿ, ರಾಜ್ಯಾದ್ಯಂತ 248 ಕೇಂದ್ರಗಳಲ್ಲಿ ಒಟ್ಟು 75,995 ಮಂದಿ ವಿದ್ಯಾರ್ಥಿಗಳು ಜೂನ್.24 ರಿಂದ ಜು.5 ವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ಪರೀಕ್ಷೆ ಬರೆದಿದ್ದು, ಅವರ ಫಲಿತಾಂಶವನ್ನು ತಮ್ಮ ಅಧಿಕೃತ ಜಾಲತಾಣ karresults.nic.in ನಲ್ಲಿ ನೋಡಬಹುದಾಗಿದೆ ಎಂದು ವಿವರಿಸಿದೆ.