Mysore
22
overcast clouds

Social Media

ಗುರುವಾರ, 17 ಜುಲೈ 2025
Light
Dark

ಹಂಪಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗುಡ್‌ನ್ಯೂಸ್‌ ಕೊಟ್ಟ ಪುರಾತತ್ವ ಸರ್ವೇಕ್ಷಣ ಇಲಾಖೆ

ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿಗೆ ಬರುವ ಪ್ರವಾಸಿಗರಿಗೆ ಪುರಾತತ್ವ ಸರ್ವೇಕ್ಷಣ ಇಲಾಖೆ ಗುಡ್‌ನ್ಯೂಸ್‌ ನೀಡಿದ್ದು, ಇನ್ನು ಮುಂದೆ ಕ್ಯೂ ಆರ್‌ ಕೋಡ್‌ಗೆ ಸ್ಕ್ಯಾನ್‌ ಮಾಡಿ ಸಂಗೀತದ ಸ್ವಾದವನ್ನು ಸವಿಯಬಹುದಾಗಿದೆ.

ಭಾರತದ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಸಂಗೀತದ ಕಂಬಗಳಿಗೆ ಪ್ರಾಯೋಗಿಕವಾಗಿ ಕ್ಯೂ ಆರ್‌ ಕೋಡನ್ನು ಅಳವಡಿಸಲಾಗಿದೆ.

ಪ್ರವಾಸಿಗರು ಕ್ಯೂ ಆರ್‌ ಕೋಡ್‌ಗೆ ಸ್ಕ್ಯಾನ್‌ ಮಾಡುವುದರ ಮೂಲಕ ಸಂಗೀತವನ್ನು ಕೇಳುವ ವ್ಯವಸ್ಥೆ ಮಾಡಲಾಗಿದೆ.

ಇನ್ನು ಇಲ್ಲಿ ಪ್ರವಾಸಿಗರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಂಬಕ್ಕೆ ಕ್ಯೂ ಆರ್‌ ಕೋಡ್‌ ಅಳವಡಿಸುವ ಪ್ಲಾನ್‌ ಮಾಡಲಾಗಿದೆ.

ಸ್ಥಳೀಯರು ಹಾಗೂ ಪ್ರವಾಸಿಗರ ಸಲಹೆಯ ಮೇರೆಗೆ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ.

ಈ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆದಾಯ ಬರಲಿದ್ದು, ಮುಂದಿನ ದಿನಗಳಲ್ಲಿ ಹಂಪಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಪುರಾತತ್ವ ಸರ್ವೇಕ್ಷಣ ಇಲಾಖೆ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

Tags:
error: Content is protected !!