ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ, ಆದರೆ ಸಮಯ ಬಂದಾಗ ನೋಡೋಣ ಎಂದು ಸಚಿವ ಸತೀ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.22) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಸಮಯ ಬಂದಾಗ ನಿರ್ಧಾರ ಮಾಡುತ್ತದೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ಮೇಲೆ ಸಮಯ ತೆಗೆದುಕೊಳ್ಳಬಹುದು. ಕೂಡಲೇ ಬದಲಾಗುವುದಿಲ್ಲ, ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಸ್ವಾಭಾವಿಕವಾಗಿ ಅಭಿಮಾನಿಗಳು ನಾನು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಾಗಬೇಕೆಂದು ಆಸೆ ಪಡುತ್ತಾರೆ. ಆದಎ ನಾನು ಆಕಾಂಕ್ಷಿ ಅಲ್ಲ, ಒಂದು ವೇಳೆ ಸಮಯ ಕೂಡಿ ಬಂದಾಗ ನೋಡೋಣ. ಅಲ್ಲದೇ ಈ ವಿಚಾರಗಳು ನಮ್ಮ ವ್ಯಾಪ್ತಿಗೆ ಬರಲ್ಲ ನಾವು ಕೇವಲ ಮಂತ್ರಿ ಅಷ್ಟೆ ಏನಿದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಿಎಂ ಸ್ಥಾನಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೇಸ್‌ನಲ್ಲಿರುವ ಬಗ್ಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಈಗಿನಿಂದಲ್ಲ ಅವರು ಮೊದಲಿನಿಂದಲೂ ರೇಸ್‌ನಲ್ಲಿದ್ದಾರೆ. ಆದರೆ ನಾವೆಲ್ಲಾ ಸಮಯಕ್ಕಾಗಿ ಕಾಯಬೇಕು. ಕಾದು ನೋಡೋಣ ಎಂದು ತಿಳಿಸಿದರು.





