ಶಿವಮೊಗ್ಗ : ಇಲ್ಲಿನ ಸಕ್ರಬೈಲು ಆನೆ ಶಿಬಿರದಲ್ಲಿ ಭಾನುಮತಿ ಎಂಬ ಹೆಣ್ಣಾನೆಯ ಬಾಲವನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಹಾಗೂ ಕಿರಿಯ ಕಾವಾಡಿಗರಾದ ಸುದೀಪ್ ಮತ್ತು ಮೊಹಮ್ಮದ್ ಎಂಬುವವರನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್‌ಓ ಪ್ರಸನ್ನ ಪಟಗಾರ್ ಅಮಾನತುಗೊಳಿಸಿದ್ದಾರೆ.
ಅ.17 ರಂದು ಭಾನುಮತಿ ಎಂಬ ಹೆಣ್ಣಾನೆಯ ಬಾಲವು ಭಾಗಶಃ ತುಂಡಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಾಲ ತುಂಡಾದ ಬಗ್ಗೆ ಮಾಹಿತಿ ಪಡೆದ ಡಿಎಫ್‌ಓ ಪ್ರಸನ್ನ ಅವರು ಎಸಿಎಫ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು.
ಈ ಸಮಿತಿ ವರದಿಯ ಪ್ರಕಾರ ಆಣೆ ಬಾಲ ಭಾಗಶಃ ತುಂಡಾಗಲು ಹರಿತವಾದ ಆಯುಧಗಳನ್ನು ಬಳಸಲಾಗಿದ್ದು, ಇದರ ಹೊಣೆಗಾರಿಕೆಯನ್ನು ಮಾವುತ ಮತ್ತು ಕಾವಾಡಿಗರೇ ಹೊರಬೇಕು ಎಂದು ವರದಿ ನೀಡಲಾಗಿತ್ತು. ಈ ವರದಿಯ ಆಧಾರ ಕಾವಾಡಿಗಳಿಬ್ಬರನ್ನು ಡಿಎಫ್‌ಓ ಅಮಾನತು ಮಾಡಿದ್ದಾರೆ. ವಿಚಾರಣೆ ಮುಗಿಯುವ ವರೆಗೆ ಭಾನುಮತಿ ಬೇರೆಯವರ ಉಸ್ತುವಾರಿಯಲಿರಲಿದೆ ಎಂದು ತಿಳಿಸಿದರು.
ಭಾನುಮತಿ ಹೆಣ್ಣಾನೆಯು ಗರ್ಭಿಣಿಯಾಗಿದ್ದು, ನವೆಂಬರ್ 04ರಂದು ಹೆಣ್ಣು ಮರಿಗೆ ಜನ್ಮ ನೀಡಿದೆ.