Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ತೈಲ ಬೆಲೆ ಏರಿಕೆ; ಪ್ರತಿಭಟಿಸಲು ಬಿಜೆಪಿಗೆ ನೈತಿಕತೆ ಇಲ್ಲ; ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ. ಅವರಿಗೆ ನಾಚಿಕೆಯಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಜನಸಾಮಾನ್ಯರ ದಿನನಿತ್ಯದ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸಿ, ಎಲ್ಲಾ ಅನಿಲಗಳ ದರವನ್ನು ಹೆಚ್ಚಿಸಿದವರು ಬಿಜೆಪಿಯವರೇ. ಈ ಹಿಂದೆ ಪೆಟ್ರೋಲ್ ಬೆಲೆ 70 ರೂ. ಇದ್ದದ್ದನ್ನು ಹೆಚ್ಚಳ ಮಾಡಿದ್ದು ಬಿಜೆಪಿ, ಆಗೆಯೇ ಅಡುಗೆ ಅನಿಲ ಬೆಲೆ 1,200 ರೂ. ಗೆ ಹೆಚ್ಚಿಸಿದ್ದು ಬಿಜೆಪಿಯೇ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಿದೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು. ಆಡಳಿತ ನಡೆಸುವವರು ತೆರಿಗೆ ಸಂಗ್ರಹ ಮಾಡಬೇಕಲ್ಲವೇ? ಬೆಲೆ ಇಳಿಸಲು ಬಿಜೆಪಿಯ 17 ಸಂಸದರು ಕೇಂದ್ರ ಸರ್ಕಾರದ ಮುಂದೆ ಪ್ರತಿಭಟನೆ ಮಾಡಲಿ ಎಂದು ಹೇಳಿದರು.

ತೆರಿಗೆ ಸಂಗ್ರಹ ಮಾಡುವುದು ಸಹಜ. ಆದರೆ ಅದು ಸಾರ್ವಜನಿಕರಿಗೆ ಹೊರೆಯಾಗಬಾರದು. ನಮ್ಮ ರಾಜ್ಯದ ತೈಲ ಬೆಲೆ ಬೇರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದರು.

Tags: