Mysore
23
broken clouds

Social Media

ಗುರುವಾರ, 07 ಮೇ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾಳೆ ದರ್ಶನ್‌ ಜಾಮೀನು ಭವಿಷ್ಯ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ಭವಿಷ್ಯ ನಾಳೆಗೆ ನಿರ್ಧಾರವಾಗಲಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಪೀಠವು ನಾಳೆ ಮಧ್ಯಾಹ್ನ 2.30ಕ್ಕೆ ಆದೇಶ ಹೊರಡಿಸಲಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಗೌಡ, ನಾಗರಾಜ್‌, ಲಕ್ಷ್ಮಣ್‌, ಅನುಕುಮಾರ್‌, ಜಗದೀಶ್‌ ಹಾಗೂ ಪ್ರದೋಷ್‌ ಜಾಮೀನು ಆದೇಶ ನಾಳೆಗೆ ಹೊರಬೀಳಲಿದೆ.

ಇನ್ನು ತೀವ್ರ ಬೆನ್ನುನೋವಿನ ಕಾರಣ ಮಧ್ಯಂತರ ಜಾಮೀನಿನ ಮೇಲೆ ದರ್ಶನ್‌ ಜೈಲಿನಿಂದ ಹೊರಬಂದಿದ್ದು, ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೆ ಕೊಲೆ ಆರೋಪಿ ದರ್ಶನ್‌ಗೆ ಇದುವರೆಗೂ ಆಪರೇಷನ್‌ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಜಾಮೀನು ಅವಧಿ ವಿಸ್ತರಿಸುವಂತೆ ಕೋರ್ಟ್‌ಗೆ ದರ್ಶನ್‌ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರವಾಗಲಿದ್ದು, ದರ್ಶನ್‌ ಜಾಮೀನು ಸಿಗುತ್ತೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.

 

Tags:
error: Content is protected !!