ರೇಣುಕಾಸ್ವಾಮಿ ಕೊಲೆ ಪ್ರಕರಣ: ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಎಸಿಪಿ ಹಲ್ಲೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಮತ್ತು ಗ್ಯಾಂಗ್‌ ಮಾಡಿರುವ ಕೃತ್ಯದ ಬಗ್ಗೆ ಹಾಗೂ ಪೊಲೀಸರ ವಿಚಾರಣೆಯನ್ನು ಮಾಧ್ಯಮದವರು ವಾಸ್ತವದ ವರದಿ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ.

ನಿನ್ನೆ(ಜೂ.12) ರಾತ್ರಿ ಮಾಧ್ಯಮದವರು ವರದಿ ಮಾಡಲು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಬಳಿ ತೆರಳಿದ್ದರು. ಈ ವೇಳೆ ಎಸಿಪಿ ಭರತ್‌ ರೆಡ್ಡಿ ಅವರು ವರದಿ ಮಾಡುತ್ತಿರುವ ಮಾಧ್ಯಮದವರನ್ನು ತಳ್ಳಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಠಾಣೆ ಬಳಿ ಬಂದರೆ ಲಾಠಿ ಚಾರ್ಜ್‌ ಮಾಡುವುದಾಗಿ ಸೂಚನೆ ಮಾಡಿದ್ದಾರೆ.

ಮಾಧ್ಯಮದವರ ಮೇಲೆ ಹಲ್ಲೆ ನನ್ನ ಗಮನಕ್ಕೆ ಬಂದಿಲ್ಲ: ‌ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ವರದಿ ಮಾಡಲು ಠಾಣೆ ಬಳಿ ತೆರಳಿದ ಮಾಧ್ಯಮದವರ ಮೇಲೆ ಎಸಿಪಿ ಭರತ್‌ ರೆಡ್ಡಿ ಅವರು ಹಲ್ಲೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆತರ ಏನಾದರೂ ನಡೆದಿದ್ದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ.