ರೇಣುಕಾಸ್ವಾಮಿ ಕೊಲೆ ಕೇಸ್:‌‌ ಆರೋಪಿ ಪವಿತ್ರಗೌಡ ನಿವಾಸದಲ್ಲಿ ಸ್ಥಳ ಮಹಜರು

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಹಾಗೂ ನಟಿ ಪವಿತ್ರಗೌಡ ಸೇರಿದಂತೆ ಅನೇಕರು ಆರೋಪಿಗಳಾಗಿದ್ದಾರೆ. ಈ ಎಲ್ಲಾ ಆರೋಪಿಗಳ ಸ್ಥಳ ಮಹಜರು ಕೆಲಸ ಮುಂದುವರೆಯುತ್ತಿದ್ದು, ಇಂದು(ಜೂ.16) ಪ್ರಕರಣದ ಎ1 ಆರೋಪಿ ನಟಿ ಪವಿತ್ರಗೌಡ ಅವರ ಬೆಂಗಳೂರಿನ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

ಕೊಲೆ ದಿನದಂದು ಪವಿತ್ರ ಧರಿಸಿದ ಬಟ್ಟೆಗಳು, ವಸ್ತುಗಳು ಹಾಗೂ ವಿವಿಧ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಪವಿತ್ರಗೌಡ 10 ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದಾರೆ. ಮೂರು ಅಂತಸ್ತಿನ ಮನೆಯಲ್ಲಿ ಪವಿತ್ರ ಹಾಗೂ ಮನೆಕೆಲಸದವರು ಇದ್ದರು. ಪವಿತ್ರಗೌಡ ಮಗಳು ಹಾಸ್ಟೆಲ್‌ನಲ್ಲಿ ಇದ್ದು, ಆಗಾಗ ಇಲ್ಲಿಗೆ ಬರುತ್ತಿದ್ದಳು.