Mysore
22
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ರೇಣುಕಾಸ್ವಾಮಿ ಕೇಸ್ : ದರ್ಶನ್ , ಪವಿತ್ರಗೌಡ ಸೇರಿ ೧೦ಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜೈಲು ಸೇರಿರುವ ನಟ ದರ್ಶನ್‌ , ಪವಿತ್ರಗೌಡ ಸೇರಿದಂತೆ ೧೦ಕ್ಕೂ ಹೆಚ್ಚು ಆರೋಪಿಗಳ ಫಿಂಗರ್‌ ಪ್ರಿಂಟ್‌ ಮ್ಯಾಚ್‌ ಆಗಿರುವ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಎಫ್‌ ಎಸ್‌ ಎಲ್‌ ವರದಿಯಲ್ಲಿ ನಟ ದರ್ಶನ್‌, ಪವಿತ್ರಾಗೌಡ, ಸೇರಿ ಹತ್ತು ಫಿಂಗರ್‌ ಪ್ರಿಂಟ್‌ ಹೋಲಿಕೆಯಾಗಿದೆ. ಕ್ರೈ ಸೀನ್.‌ ಶವ ಬಿಸಾಡಿದ್ದ ಜಾಗ, ಶವ ಸಾಗಟ ಮಾಡಿದ ವಾಹನ, ಸೆಕ್ಯೂರಿಟಿ ಗಾರ್ಡ್‌ ಕೊಠಡಿ, ರೇಣುಕಾಸ್ವಾಮಿ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ್ದ ವಸ್ತುಗಳು, ಸಾಗಟ ಮಾಡಿದಗದ ಕಾರ್‌ , ಜೊತೆಗೆ ಆರೋಗಳ ಬಟ್ಟೆಗಳ ಮೇಲಿನ ಫಿಂಗರ್‌ ಪ್ರಿಂಟ್‌ ಗಳನ್ನ FSL ತಜ್ಞರನ್ನ ಬಳಸಿ ಸಂಗ್ರಹ ಮಾಡಲಾಗಿತ್ತು.  ಬಳಿಕ ಎಲ್ಲರ ಫಿಂಗರ್‌ ಪ್ರಿಂಟ್‌ ಗಳನ್ನ ವಿಧಿ ವಿಜ್ಞಾನಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ  ನಟ ದರ್ಶನ್‌ , ಪವಿತ್ರಗೌಡ ಸೇರಿದಂತೆ ೧೦ಕ್ಕೂ ಹೆಚ್ಚು ಆರೋಪಿಗಳ ಫಿಂಗರ್‌ ಪ್ರಿಂಟ್‌ ಮ್ಯಾಚ್‌ ಆಗಿದೆ ಎನ್ನಲಾಗಿದೆ.

Tags:
error: Content is protected !!