Mysore
27
broken clouds
Light
Dark

ರೆಮಲ್‌ ಚಂಡಮಾರುತ ಎಫೆಕ್ಟ್:‌ ಅಂಡಮಾನ್‌ ನಿಕೋಬಾರ್‌ನಲ್ಲಿ ಸಿಲುಕಿದ ಕನ್ನಡಿಗರು

ಬೆಂಗಳೂರು: ರೆಮಲ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದೆ. ತೀವ್ರ ಬಿರುಗಾಳಿಯಿಂದ ಭೂಕುಸಿತ ಕಂಡುಬಂದಿದೆ.‌ ಗಾಳಿಯ ವೇಗ ಸಹ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಂಡಮಾನ್‌ ನಿಕೋಬಾರ್‌ಗೆ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಹೀಗಾಗಿ ಅಂಡಮಾನ್‌ ಸಿಕೋಬಾರ್‌ನಲ್ಲಿ ಸಿಲುಕಿದ ಕನ್ನಡಿಗರಿಗೆ ಸಂಕಷ್ಟ ಎದುರಾಗಿದ್ದು, ಬೆಳಿಗ್ಗೆ ೧೧ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ  ಜನ ಸಂಜೆಯಾದರೂ ವಿಮಾನವಿಲ್ಲದೇ, ಆಹಾರ, ನೀರು ಸಹ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಚೆನ್ನೈಯಿಂದ‌ ಅಂಡಮಾನ್‌ ನಿಕೋಬಾರ್‌ಗೆ ಹೊರಟ್ಟಿದ ವಿಮಾನ ಹವಾಮಾನ ವೈಪರೀತ್ಯ ಹಿನ್ನಲೆ ವಾಪಸ್‌ ಆಗಿದೆ. ವಿಮಾನಸೇವೆಗಳ ವ್ಯತ್ಯಯದಿಂದ ಅಂಡಮಾನ್‌ ನಿಕೊಬಾರ್‌ ಪೋರ್ಟ್‌ ಬ್ಲೇರ್‌ನಲ್ಲಿ ಕನ್ನಡಿಗರು ಏರ್‌ಪೋರ್ಟ್‌ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ.

ಮೈಸೂರು ಮೂಲದ ನಿವೃತ್ತ ಪ್ರಾಂಶುಪಾಲರಾದ ಪರಮೇಶ್‌ ಎಂಬುವವರು ಸಹ ಅಂಡಮಾನ್‌ ನಿಕೊಬಾರ್‌ನಲ್ಲಿ ಸಿಲುಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಹಸ್ತಕ್ಕೆ ಮನವಿ ಮಾಡಿದ್ದಾರೆ.