Mysore
26
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಆಶಾ ಕಾರ್ಯಕರ್ತರ ಗೌರವಧನ ಬಿಡುಗಡೆ

asha karyakarte

ಬೆಂಗಳೂರು : ಆಶಾ ಕಾರ್ಯಕರ್ತರಿಗೆ ಗೌರವಧನ ಪಾವತಿಸಲು ರಾಜ್ಯ ಸರ್ಕಾರ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡಿದೆ.

2025-26ನೇ ಸಾಲಿನಲ್ಲಿ 41 ಸಾವಿರ ಆಶಾ ಕಾರ್ಯಕರ್ತರಿಗೆ ಮಾಸಿಕ ಗೌರವಧನಕ್ಕಾಗಿ ಪ್ರತಿ ತಿಂಗಳು 5 ಸಾವಿರದಂತೆ, ಒಟ್ಟು 246 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಅಕ್ಟೋಬರ್‍ನಿಂದ ಡಿಸೆಂಬರ್ ವರೆಗಿನ ತ್ರೈ ಮಾಸಿಕ ಕಂತಿನ 61.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಆಶಾ ಕಾರ್ಯಕರ್ತರ ಗೌರವಧನ ಪಾವತಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂಬ ಷರತ್ತಿಗೊಳಪಟ್ಟು ಹಣ ಬಿಡುಗಡೆ ಮಾಡಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags:
error: Content is protected !!