ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಜೈಲು ಸೇರಿದ್ದ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ.
ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ಸ್ಟುಡಿಯೋ ಒಂದನ್ನು ಪ್ರಾರಂಭಿಸಿ ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರಿಂದ ಎಂಟು ತಿಂಗಳಿನಿಂದ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮುಚ್ಚಿದ್ದರು. ಆದರೆ ಇಂದು(ಫೆಬ್ರವರಿ.14) ತಮ್ಮ ಒಡೆತನದ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ.
ಪ್ರೇಮಿಗಳ ದಿನದಂದೇ ಸ್ಟುಡಿಯೋವನ್ನು ರೀಲಾಂಚ್ ಮಾಡಲು ತಮ್ಮ ರೇಂಜ್ ರೋವರ್ ಕಾರಿನಲ್ಲಿ ಬಂದ ಪವಿತ್ರಾ ಗೌಡ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಸ್ಟುಡಿಯೋಕ್ಕೆ ಆಗಮಿಸಿದ ನಂತರ ಗಣಹೋಮ ಮತ್ತು ಕಾರ್ಯಸಿದ್ಧಿ ಹೋಮ ಮಾಡಿಸಿ ಅದರಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಈ ರೀಲಾಂಚ್‌ಗೆ ಕೆಲವು ಆಪ್ತ ಸಂಬಂಧಕರಿಗಷ್ಟೆ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





