ಬೆಂಗಳೂರು: 1985ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಬಾಗಿಲು ತೆಗೆಸುವ ಮೂಲಕ ಮೊದಲು ರಾಮ ಮಂದಿರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಆದರೆ, ಎಲ್ಲರಿಗೂ ಇದರ ಬಗ್ಗೆ ಜಾಣ ಮರೆವಿರುವುದು ಯಾಕೆ ಎಂದು ಸಚಿವ ರಾಮಲಿಂಗರ ರೆಡ್ಡಿ ಪ್ರಶ್ನಸಿದ್ದಾರೆ.
ರಾಮಾಯಣ ನಡೆದು ಐದಾರು ಸಾವಿರ ವರ್ಷಗಳಾಗಿವೆ. ಇಷ್ಟು ವರ್ಷಗಳ ಕಾಲದಲ್ಲಿ ಲಕ್ಷಾಂತರ ದೇವಾಲಗಳು ನಿರ್ಮಾಣವಾಗಿದೆ. ಪ್ರಭು ಶ್ರೀರಾಮ ಎಲ್ಲರಿಗೂ ಆಶೀರ್ವದಿಸಲಿ ಎಂದರು.
ಮುಜರಾಯಿ ದೇವಾಲಯಗಳಲ್ಲಿ ರಾಮ ಮಂದಿರ ಉದ್ಘಾಟನಾ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಸೂಚನೆ ನೀಡಲಾಗಿತ್ತು. ಅದರಂತೆಯೇ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದೆ. ಈ ಕಾರ್ಯಕ್ರಮಗಳಿಗೆ ಬಿಜೆಪಿ ನಾಯಕರನ್ನು ಕೇಳಿ ಆದೇಶ ನೀಡಿಲ್ಲ ಎಂದು ಕಿಡಿಕಾರಿದರು.
ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ದಿನ ಎದ್ದು ರಾಮನ ಪೂಜೆ ಮಾಡಿ ಬರುತ್ತೇವೆ, ಇದನ್ನು ನಾವು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಬದಲಾಗಿ ಅವರು ನಮ್ಮ ಬಳಿ ಕಲಿಯಬೇಕು ಎಂದು ಟಾಂಗ್ ನೀಡಿದರು.





