Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮೋದಿ -ಯೋಗಿ ಇರುವವರೆಗೆ ರಾಮಮಂದಿರ ಒಡೆಯಲು ಸಾಧ್ಯವಿಲ್ಲ! : ಪೇಜಾವರ ಶ್ರೀ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ಮಾತನಾಡಿದ ಅವರು, ಮಕ್ಕಳ ಬಾಯಲ್ಲಿ ರಾಮಮಂದಿರ ಒಡೆಯುತ್ತೇವೆ ಎಂಬ ಮಾತು ಬರುತ್ತಿವೆ. ಆ ಸಮಾಜದ ಮಕ್ಕಳ ಪೋಷಕರು ಇದಕ್ಕೆ ತಡೆ ಹಾಕಬೇಕು ಇದು ಸರಿಯಲ್ಲಾ. ದೇಶದಲ್ಲಿ ಎಲ್ಲ ಸಮಾಜದವರು ಧರ್ಮದವರು ಏಕತೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸನ್ನಿಹಿತವಾಗಿದೆ, ದೇಶ ವಿದೇಶದ ಜನರು ಕೈಜೋಡಿಸಿದ್ದಾರೆ. ಮಂದಿರದ ಉದ್ಘಾಟನೆ ಮಂದಿರದಲ್ಲೇ ಆಗಬೇಕು ಆದ್ದರಿಂದ ಸೀಮಿತ ಜನರಿಗೆ ಮಾತ್ರ ಕರೆಯಲಾಗಿದೆ. ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲ್ಲ.

ಪೂಜೆ, ಅಭಿಷೇಕ, ಯಜ್ಞ-ಯಾಗ ಎಲ್ಲ ದೇವಸ್ಥಾನಗಳಲ್ಲಿ ನಡೆಯಬೇಕು. ಹಾಗಾಗಿ ರಾಮಭಕ್ತರು ತಮ್ಮ ತಮ್ಮ ಊರುಗಳಲ್ಲಿ ಉತ್ಸವ ಆಚರಣೆ ಮಾಡಬೇಕು ಎಂದು ಪೇಜಾವರ ಶ್ರೀ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ