ಕೋಲಾರ: ಲೋಕಸಭಾ ಚುನಾವಣೆ ಹಿನ್ನಲೆ ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅರಿವಿಗೆ ಬಾರದಂತೆ ಆಡಿದ ಮಾತು ಇದೀಗ ಭಾರೀ ಚರ್ಚೆಗೆ ಗುರಿಯಾಗಿದೆ.
ಕೋಲಾರದ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ಬಳಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ರಾಹುಲ್ ಗಾಂಧಿ ಕರ್ನಾಟಕ ಜನತೆಗೆ ನಮಸ್ಕಾರ ಎಂದು ಮಾತು ಮುಂದುವರೆಸಿದರು. ಬಳಿಕ ಕಾಂಗ್ರೆಸ್ ಪ್ರಬಲ ನಾಯಕರನ್ನು ಹುದ್ದೆಗಳನ್ನೇ ಬದಲಿಸಿ ಸಂಭೋದಿಸಿದರು.
ಖರ್ಗೆ ಜೀ, ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯ ಜೀ, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೀ, ಕೆ ಹೆಚ್ ಮುನಿಯಪ್ಪ ಜೀ ಎಂದು ಭಾಷಣ ಆರಂಭಿಸಿದರು. ಇದು ಬಿಜೆಪಿ ಜೆಡಿಎಸ್ ಮತ್ತು ಟ್ರೋಲರ್ಸ್ ಗಳಿಗೆ ದೊಡ್ಡ ಆಹಾರವಾಗಿ ಪರಿಣಮಿಸಿದೆ.



