Mysore
26
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಆರ್.ಅಶೋಕ್‌ ಕೆಂಡಾಮಂಡಲ

ಮಂಡ್ಯ: ಚನ್ನಪಟ್ಟಣ ಗೆಲುವಿಗೆ ಬಿಜೆಪಿ ಕಾರಣ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ತಿರುಗೇಟು ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಗೆಲುವಿಗೆ ಬಿಜೆಪಿಯವರು ಸಪೋರ್ಟ್‌ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದರು.

ಈ ಬಗ್ಗೆ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್‌ ಅವರು, ಡಿ.ಕೆ.ಶಿವಕುಮಾರ್‌ ನಮಗೂ ಹಾಗೂ ಜೆಡಿಎಸ್‌ನವರಿಗೂ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲದೇ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿದರು. ಗೆದ್ದಿದ್ದೇವೆ ಎಂದು ಕಾಂಗ್ರೆಸ್‌ ಬೀಗುತ್ತಿದ್ದು, ಈ ಗೆಲುವು ತಾತ್ಕಾಲಿಕ ಅಷ್ಟೇ ಎಂದು ಲೇವಡಿ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಈ ಉಪಚುನಾವಣೆ ಡಿಕೆಶಿ ಹಾಗೂ ಸಿದ್ದರಾಮಯ್ಯರ ಚುನಾವಣೆ ಅಲ್ಲ. ಇದು ಕಂಟ್ರ್ಯಾಕ್ಟರ್‌ ಹಾಗೂ ಹಣದ ಚುನಾವಣೆಯ ಗೆಲುವಾಗಿದೆ.
ಯಾರೂ ಕೂಡ ನಿಮ್ಮ ಪರಿಶ್ರಮದಿಂದ ಗೆದ್ದಿಲ್ಲ ಎಂದು ಕಿಡಿಕಾರಿದರು.

ಇನ್ನು ನಾವು ಮೂರು ಕ್ಷೇತ್ರಗಳಲ್ಲೂ ಪೂರ್ತಿ ಮನಸ್ಸಿನಿಂದ ಚುನಾವಣೆ ಎದುರಿಸಿದ್ದೇವೆ. ನಿಖಿಲ್‌ ಕುಮಾರಸ್ವಾಮಿಗೆ ಅದೃಷ್ಟ ಇರಲಿಲ್ಲ. ಮುಂದೆ ನಿಖಿಲ್‌ಗೆ ಒಳ್ಳೆಯ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:
error: Content is protected !!