Mysore
26
haze

Social Media

ಸೋಮವಾರ, 30 ಮಾರ್ಚ್ 2026
Light
Dark

ಅಕ್ಟೋಬರ್.‌3ಕ್ಕೆ ಪಿಎಸ್‌ಐ ಪರೀಕ್ಷೆಗೆ ದಿನಾಂಕ ನಿಗದಿ

ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಒತ್ತಾಯದಿಂದ ಎರಡು ಬಾರಿ ಮುಂದೂಡಿಕೆ ಆಗಿದ್ದ ಪಿಎಸ್‌ಐ ಪರೀಕ್ಷೆಗೆ ಹೊಸ ದಿನಾಂಕ ನಿಗದಿಯಾಗಿದೆ.

ಅಕ್ಟೋಬರ್.‌3ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕ ನಿಗದಿ ಮಾಡಿದೆ.

ಅಂದು ಬೆಳಿಗ್ಗೆ 10.30 ರಿಂದ 12 ರವರೆಗೆ ಪತ್ರಿಕೆ 1 ಹಾಗೂ ಮಧ್ಯಾಹ್ನ 12.30 ರಿಂದ 2ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.

ಇನ್ನು ಪಿಎಸ್‌ಐ ಪರೀಕ್ಷೆ ಜೊತೆಗೆ ವಿವಿಧ ಇಲಾಖೆಗಳ ಪರೀಕ್ಷೆಗಳಿಗೂ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟಿಸಿದ್ದು, ಗ್ರಾಮ ಆಡಳಿತಾಧಿಕಾರಿಗಳು ಮತ್ತು ಜಿಟಿಟಿಸಿಯ ವಿವಿಧ ಹುದ್ದೆಗಳಿಗೆ ಸೆಪ್ಟೆಂಬರ್‌.29 ಮತ್ತು ಅಕ್ಟೋಬರ್.‌26 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅಕ್ಟೋಬರ್.7 ರಂದು ಪರೀಕ್ಷೆ ನಡೆಯಲಿದೆ.

 

Tags:
error: Content is protected !!