ಬೆಂಗಳೂರು: ರಾಜ್ಯ ಬಜೆಟ್ (Karnataka Budget) ಮಂಡನೆಗೂ ಮುನ್ನವೇ ಎಣ್ಣೆ ಪ್ರಿಯರಿಗೆ ಗ್ಯಾರಂಟಿ ಸರ್ಕಾರ (Congress Government) ಮತ್ತೆ ಶಾಕ್ ಕೊಟ್ಟಿದೆ.
ಇಂದಿನಿಂದ ಬಿಯರ್ ದರ ₹10 ರಿಂದ ₹15 ಹೆಚ್ಚಳವಾಗಿದೆ. ಇವತ್ತೇ ಹೊಸ ದರಗಳು ಅನ್ವಯವಾಗಲಿವೆ. ಜನವರಿ 20ರಂದು ಬಿಯರ್ ಅಬಕಾರಿ ಸುಂಕ (Excise duty) ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ಇದೀಗ ರಾಜ್ಯ ಸರ್ಕಾರ ಬಿಯರ್ ದರ ಏರಿಸಿ ಅಧಿಕೃತ ಆದೇಶ ಹೊರಡಿಸಿದೆ.
ಬ್ರ್ಯಾಂಡ್ ಹಳೆಯ ದರ (ರೂ.ಗಳಲ್ಲಿ) ಹೊಸ ದರ (ರೂ.ಗಳಲ್ಲಿ)
KF ಪ್ರಿಮಿಯಂ 175 -185
ಟ್ಯೂಬರ್ಗ್ 175 -185
ಬಡ್ ವೈಸರ್ 230 -240
ಕಾರ್ಲ್ಸ್ ಬರ್ಗ್ 230- 240
UB ಸ್ಟ್ರಾಂಗ್ 140 -150
KF ಸ್ಟಾರ್ಮ್ 175 -195
ಹೆನಿಕೇನ್ 225 -240
ಹೆನಿಕೇನ್ ಸಿಲ್ವರ್ 225 -240
KF ಟಿನ್ (500ml) 140 -145
ಆಯಮ್‌ಸ್ಟೆಲ್ 225 -240





