ಬಾಗಲಕೋಟೆ: ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಬಂಧನ ವಿಚಾರ ಹಾಸನದಲ್ಲಿ ಮಾನವ ಕುಲವೇ ತಲೆ ತಗ್ಗಿಸುವ ಕೆಲಸ ನಡೆದಿದ್ದು ಇದು ನಿನ್ನೆ ಮೊನ್ನೆ ನಡೆದುದ್ದಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಅಸಹಜ ಲೈಂಗಿಕ ಪ್ರಕರಣದಲ್ಲಿ ಎಂಎಲ್‌ಸಿ ಸೂರಜ್ ರೇವಣ್ಣ ಮತ್ತು ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿರುವ ವಿಚಾರವಾಗಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಇದು ಬಹಳಷ್ಟು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದು ಈಗ ಸಂತ್ರಸ್ತೆಯರು ಧೈರ್ಯವಾಗಿ ಹೇಳಲು ಮುಂದೆ ಬರುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಈ ವಯಸ್ಸಲ್ಲಿ ಈ ರೀತಿಯ ಮಾನಸಿಕೆ ಹಿಂಸೆ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ಆಚೆ ಬಂದು ಹೇಳಿಕೊಳ್ಳುವುದಕ್ಕೆ ಧೈರ್ಯ ಇರಲಿಲ್ಲ. ಈಗ ನಾನು ಉಸ್ತುವಾರಿ ಸಚಿವನಾದ ಮೇಲೆ ನಾನು ಧೈರ್ಯ ತುಂಬಿದ್ದೇನೆ. ನಿಮಗೆ ರಕ್ಷಣೆ ಕೊಡ್ತೀವಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆ ವೇಳೆ ನಿಮ್ಮ ಜೊತೆ ಇರುತ್ತೇವೆ ಎಂದಿದ್ದೇವೆ. ಈ ರೀತಿಯಾಗಿ ಧೈರ್ಯ ತುಂಬಿದ ಪರಿಣಾಮ ಸಂತ್ರಸ್ತರು ಒಬ್ಬೊಬ್ಬರಾಗಿ ಆಚೆ ಬಂದು ಹೇಳುತ್ತಿದ್ದಾರೆ ಎಂದರು.