Mysore
20
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಉತ್ತರಿಸುವ ಅಗತ್ಯವಿಲ್ಲ: ಸಂಸದ ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿಯೊಬ್ಬರೂ ಅಪ್ರಬುದ್ಧ ರಾಜಕಾರಣಿ ಅವರ ಆರೋಪಕ್ಕೆ ಉತ್ತರಿಸುವ ಅಗತ್ಯ ನನಗೆ ಇಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು(ಏಪ್ರಿಲ್‌.6) ಕೇಂದ್ರ ಸರ್ಕಾರ ವಕ್ಫ್ ಬಿಲ್ ತಿದ್ದುಪಡಿ ಬೆನ್ನಲ್ಲಿಯೇ ಕ್ರಿಶ್ಚಿಯನ್ನರ ಆಸ್ತಿ ಮೇಲೆ ಆರ್‌ಎಸ್‌ಎಸ್‌ ಕಣ್ಣಿಟ್ಟಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಮಸೂದೆಯನ್ನು ಮಂಡಿಸುವ ವೇಳೆ ರಾಹುಲ್ ಹಾಗೂ ಸಂಸದೆ ಪ್ರಿಯಾಂಕಾ ವಾದ್ರಾ ಸಂಸತ್ತಿನ ಒಳಗೆ ಬಂದಿರಲಿಲ್ಲ. ಮುಸ್ಲಿ ಪರವಾಗಿಯೇ ರಾಹುಲ್ ಮತ್ತು ಪ್ರಿಯಾಂಕ ಅವರು ಇದ್ದಾರೆ. ಹೀಗಿದ್ದರೂ ಅವರೇಕೆ ಲೋಕಸಭೆಗೆ ಬರಲಿಲ್ಲ.? ರಾಹುಲ್ ಗಾಂಧಿಗೆ ಗಂಭೀರತೆಯೇ ಇಲ್ಲ. ಅವರ ಹೇಳಿಕೆಗೆ ನಾನೇಕೆ ಪ್ರತಿಕ್ರಿಯೆ ನೀಡಬೇಕು. ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಮಾತಿಗೆ ಉತ್ತರಿಸುವ ಅವಶ್ಯಕತೆ ನನಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇರಳದ ವಯನಾಡಿನಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಅವರ ವಿರುದ್ಧ ಅಲ್ಲಿನ ಜನತೆ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಆ ವಿಚಾರವನ್ನು ಬೇರೆ ಕಡೆಗೆ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರೇ ಕೆಲ ಚರ್ಚ್‌ಗಳನ್ನು ವಕ್ಫ್ ಮಾಡಲು ಹೊರಟಿದ್ದರು. ಆದರೆ ವಕ್ಫ್ ತಿದ್ದುಪಡಿಯಿಂದಾಗಿ ಕ್ರಿಶ್ಚಿಯನ್ನರೂ ಇದೀಗ ಖುಷಿಯಲ್ಲಿದ್ದಾರೆ ಎಂದರು.

ಓಟ್ ಬ್ಯಾಂಕ್ ಜಾಸ್ತಿ ಇದೆಯೆಂಬ ಕಾರಣಕ್ಕೆ ಕ್ರಿಶ್ಚಿಯನ್ನರನ್ನು ಬಿಟ್ಟು ಮುಸ್ಲಿಮರ ಬೆನ್ನುಹತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬರೀ ಓಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಇನ್ನೂ ದೇಶದಲ್ಲಿ ವಕ್ಫ್ ಆಸ್ತಿ 18 ಲಕ್ಷದಿಂದ 39 ಲಕ್ಷ ಎಕರೆಗೆ ಏರಿಕೆಯಾಗಿದೆ. ಅದಕ್ಕೆ ಸರಿಯಾದ ರೀತಿಯಲ್ಲಿ ಆದಾಯ ಬಂದರೆ ಮುಸಲ್ಮಾನರಿಗೂ ಖುಷಿಯಾಗುತ್ತದೆ ಎಂದು ಹೇಳಿದರು.

Tags:
error: Content is protected !!