ಬೆಂಗಳೂರು: ಎರಡು ಬಾರಿ ಮುಂದೂಡಲಾಗಿದ್ದ ಪಿಎಸ್‌ಐ ಪರೀಕ್ಷೆಯನ್ನು ಅ.3ಕ್ಕೆ ನಿಗದಿ ಮಾಡಿದ್ದು, ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 402 ಪಿಎಸ್‌ಐ ಹುದ್ದೆಗಳಿಗೆ ಮೊದಲಿಗೆ ಸೆ.22ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಬಳಿಕ ಪರೀಕ್ಷೆ ಮುಂದೂಡಬೇಕೆಂದ ಒತ್ತಾಯ ಬಂದರಿಂದ ಸೆ.28 ರಂದು ನಡೆಸಲು ತೀರ್ಮಾನಿಸಲಾಗಿತ್ತು.ಆದರೆ, ಆ ದಿನ ಯುಪಿಎಸ್‌ಯ ಪರೀಕ್ಷೆ ಇರುವುದರಿಂದ ಅಂತಿಮವಾಗಿ ಅ.3 ಕ್ಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.