ಬೆಂಗಳೂರು: ಮುಡಾ ಹಗರಣ ವಿರೋಧಿಸಿ ಬಿಜೆಪಿ- ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ನಡೆಸುತ್ತಿರುವ ಪಾದಯಾತ್ರೆಗೆ ಅನುಮತಿ ನೀಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಈ ಕುರಿತ ಮಾಹಿತಿ ನೀಡಿದ ಗೃಹ ಸಚಿವರು, ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಅನುಮತಿ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಈ ಮೊದಲು ಅನುಮತಿ ನೀಡುವುದಿಲ್ಲ ಎಂಬ ನಿಲವು ತೆಗೆದುಕೊಳ್ಳಲಾಗಿತ್ತು. ಗಲಾಟೆಯಾಗಬಹುದೆಂಬ ಆತಂಕ ಇತ್ತು. ಆದರೆ ಎರಡೂ ಪಕ್ಷಗಳ ನಾಯಕರೂ ಕಾನೂನು ಪಾಲನೆ ಮಾಡುತ್ತೇವೆ. ಗಲಾಟೆ ನಡೆಯುವುದಿಲ್ಲ. ಶಾಂತಿಯುತ ಹೋರಾಟ ನಡೆಸುತ್ತೇನೆ ಎಂದಿದ್ದಾರೆ. ಪ್ರತಿಭಟನೆ ಅವರ ಹಕ್ಕು. ಅದಕ್ಕಾಗಿ ಅನುಮತಿ ನೀಡಲಾಗುವುದು ಎಂದರು.
ಇಂದು ಬೆಳಿಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದೇ ಹೇಳಿದ್ದರು.