Mysore
26
broken clouds
Light
Dark

ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರಿಗೆ ಆಫರ್‌: ಶಾಸಕ ಗಣಿಗಗೆ ಸಂಕಷ್ಟ!

ಹುಬ್ಬಳ್ಳಿ: ಕರ್ನಾಟಕದಲ್ಲಿ ಆಪರೇಷನ್‌ ಕಮಲ ನಡೆಸಲು ಮುಂದಾಗಿದ್ದು, ಕಾಂಗ್ರೆಸ್‌ ಶಾಸಕರಿಗೆ ನೂರು ಕೋಟಿ ರೂ. ಆಫರ್‌ ನೀಡಿದ್ದಾರೆ ಎಂಬ ಶಾಸಕ ರವಿ ಗಣಿಗ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ. ರಾಜೀವ್‌ ಅವರು ಹುಬ್ಬಳಿಯ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ನೂರು ಕೋಟಿ ಆಫರ್‌ ವಿಚಾರ ನಿರಾಧಾರವಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.