Mysore
22
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಶ್ರೀಗಳ ಬಗ್ಗೆ ಲಘುವಾಗಿ ರಾಜಣ್ಣ ಮಾತಾಡೋದು ಸರಿಯಲ್ಲ : ನಿಖಿಲ್ ಕುಮಾರಸ್ವಾಮಿ

ಮಂಡ್ಯ : ಹಿರೀಕರಾಗಿರುವ ರಾಜಣ್ಣ, ಶ್ರೀಗಳ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಸಚಿವ ಕೆ.ಎನ್ ರಾಜಣ್ಣ ಚಂದ್ರಶೇಖರ್ ಶ್ರೀಗಳಿಗೆ ಕಾವಿ ಬಿಟ್ಟುಕೊಡುತ್ತಾರಾ, ನಾನೂ ಸ್ವಾಮೀಜಿ ಅಗ್ತೀನಿ ಅಂತ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌, ರಾಜಣ್ಣನವರು ವಯಸ್ಸಿನಲ್ಲಿ ಹಿರೀಕರು, ಅವರ ಬಗ್ಗೆ ಗೌರವವಿದೆ, ಅದರೆ ಸ್ವಾಮೀಜಿಗಳು ಸಮಾಜಮುಖಿ ಕೆಲಸ ಮಾಡುತ್ತಾರೆ, ಅವರ ಬಗ್ಗೆ ಲಘುವಾಗಿ ರಾಜಣ್ಣ ಮಾತಾಡೋದು ಸರಿಯಲ್ಲ, ಅವರು ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಲಿ ಎಂದಷ್ಟೇ ಹೇಳುತ್ತೇನೆ ಎಂದರು.

ಇದೇ ವೇಳೆ  ಕುಮಾರಸ್ವಾಮಿಯವರು ಮತ್ತೊಮ್ಮೆ ಸಿಎಂ ಆಗ್ತಾರ..? ಕಾಂಗ್ರೆಸ್ ಶಾಸಕರು ನಿಮ್ಮ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಭಗವಂತನಿಗೆ ಮಾತ್ರ ಗೊತ್ತಿರುವ ಸಂಗತಿಗಳನ್ನು ನನಗೆ ಕೇಳಿದರೆ ಹೇಗೆ..? ಕೆಲವು ಸಂಗತಿಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡೋದು ಸೂಕ್ತವಲ್ಲ ಎಂದು ಒಗಟಿನ ರೂಪದಲ್ಲಿ ಮಾತನಾಡಿದರು.

Tags:
error: Content is protected !!