Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನ್ಯೂ ಇಯರ್‌ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು ಜನತೆ: ಪ್ರಮುಖ ರಸ್ತೆಗಳಲ್ಲಿ ಖಾಕಿ ಕಟ್ಟೆಚ್ಚರ

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಯುವಕ-ಯುವತಿಯರಲ್ಲಿ ನ್ಯೂಇಯರ್‌ ಜೋಶ್‌ ಹೆಚ್ಚಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಜನರು ಪಾರ್ಟಿ ಮಾಡಿ ಎಂಜಾಯ್‌ ಮಾಡುವ ಮೂಡ್‌ನಲ್ಲಿದ್ದರೆ, ಬೆಂಗಳೂರಿನ ಎಂ.ಜಿ.ರೋಡ್‌ ಹಾಗೂ ಬ್ರಿಗೇಡ್‌ ರೋಡ್‌ ಕಲರ್‌ ಪುಲ್‌ ಲೈಟಿಂಗ್ಸ್‌ನೊಂದಿಗೆ ಕಂಗೊಳಿಸುತ್ತಿವೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರಿಗೇಡ್‌ ರೋಡ್‌, ಎಂ.ಜಿ.ರೋಡ್‌, ಚರ್ಚ್‌ ಸ್ಟ್ರೀಟ್‌, ಕೋರಮಂಗಲದಲ್ಲಿ ಸಕಲ ಸಿದ್ಧತೆ ನಡೆದಿದ್ದು, ಯುವಕ ಹಾಗೂ ಯುವತಿಯರು ನ್ಯೂ ಇಯರ್‌ ಸಂಭ್ರಮಾಚರಣೆ ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇನ್ನು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕುಡಿದು ಟೈಟ್‌ ಆಗುವವರಿಗೆ ಬೆಡ್‌ ವ್ಯವಸ್ಥೆ ಮಾಡಲಾಗಿದ್ದು, ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಣಿ ಚೆನ್ನಮ್ಮ ಪಡೆ ಕೂಡ ಕಾರ್ಯನಿರ್ವಹಿಸಲಿದೆ.

ಪ್ರಮುಖ ರಸ್ತೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಕೆ ಮಾಡಲಾಗಿದೆ.

ಇನ್ನು ಜನರು ನ್ಯೂಇಯರ್‌ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿ ಮತ್ತೆ ವಾಪಸ್‌ ತೆರಳಲು ಮೆಟ್ರೋ, ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ರಾತ್ರಿ 2 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿದ್ದು, ಪ್ರಮುಖ ರಸ್ತೆಗಳಿಂದಲೂ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

 

Tags:
error: Content is protected !!