Mysore
26
broken clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಅಧಿಕಾರ ಜಟಾಪಟಿ ನಡುವೆ ಹೈಕಮಾಂಡ್‌ಗೆ ಪತ್ರ ಬರೆದ ಕಾಂಗ್ರೆಸ್‌ನ ಹೊಸ ಶಾಸಕರು : ಕಾರಣವೇನು?

mallikarjun kharge warning congress

ಬೆಂಗಳೂರು : ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿರುವ ಜಟಾಪಟಿ ಬೆನ್ನಲ್ಲೇ, ಮೊದಲ ಬಾರಿಗೆ ಗೆದ್ದಿರುವ ಶಾಸಕರು ಸಚಿವ ಸಂಪುಟ ವಿಸ್ತರಣೆ ಅಥವಾ ಪುರ್ನರಚನೆಯಲ್ಲಿ ತಮಗೊಂದು ಅವಕಾಶ ನೀಡುವಂತೆ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ಹೊಸ ಬೆಳವಣಿಗೆಯಾಗಿದೆ.

ಸುಮಾರು 31ಕ್ಕೂ ಹೆಚ್ಚು ಶಾಸಕರು ಪತ್ರ ಬರೆದಿದ್ದು, ಸಚಿವ ಸಂಪುಟ ದಲ್ಲಿ ತಮಗೊಂದು ಅವಕಾಶ ನೀಡಿದರೆ ಪಕ್ಷ ಮತ್ತು ಸಂಘಟನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಹೊಸದಾಗಿ ಗೆದ್ದ ಕಾಂಗ್ರೆಸ್ ಶಾಸಕರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬೆಳಗಾವಿ ಹಾಗೂ, ಬೆಂಗಳೂರು ಅಧಿವೇಶನದಲ್ಲಿ ಮೂರ್ನಾಲ್ಕು ಹೊಸ ಶಾಸಕರ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆದಿತ್ತು ಎನ್ನಲಾಗಿದ್ದು, ಈಗ 31ಶಾಸಕರ ಸಹಿ ಇರುವ ಪತ್ರ ಈಗ ವೈರಲ್ ಆಗಿದೆ.

ಕಾಂಗ್ರೆಸ್ ನಲ್ಲಿ 38 ಶಾಸಕರು‌ ಹೊಸದಾಗಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಸಿಎಂ ಆಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಮೊದಲ ಬಾರಿ ಗೆದ್ದ ಶಾಸಕರಿಗೂ ಸಚಿವ ಸ್ಥಾನ ನೀಡಿ ಅವಕಾಶ ಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ದಿನಾಂಕ ಇಲ್ಲದ ಪತ್ರ ಬಿಡುಗಡೆ ಆಗಿದ್ದು ಕನಿಷ್ಠ 5 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
ಕರ್ನಾಟಕದಲ್ಲಿ ಹೊಸ ಮುಖಗಳನ್ನು ಜನರು ಬಯಸಿದ್ದರು. ಹಾಗಾಗಿ ಕಾಂಗ್ರೆಸ್ ನಲ್ಲಿ 38 ಹೊಸ ಮುಖಗಳನ್ನ ಗೆಲ್ಲಿಸಿದ್ದರು. ಆದರೆ ಕ್ಯಾಬಿನೆಟ್ ನಲ್ಲಿ ಒಬ್ಬರೇ ಒಬ್ಬ ಮೊದಲ ಸಲ ಗೆದ್ದ ಶಾಸಕರಿಗೆ ಅವಕಾಶ ಸಿಕ್ಕಿಲ್ಲ.‌ ಸಚಿವ ಸಂಪುಟ ಪುನಾರಚನೆ ಮಾಡಿ ಮೊದಲ ಬಾರಿ ಗೆದ್ದ ಕನಿಷ್ಠ 5 ಶಾಸಕರಿಗೆ ಅವಕಾಶ ಕೊಡಿ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿ ಗೆದ್ದವರು ಸಿಎಂ ಆಗಿದ್ದಾರೆ. ಹಾಗಾಗಿ 2028ರ ಚುನಾವಣೆಯ ದೃಷ್ಟಿಯಿಂದ ಮೊದಲ ಬಾರಿ ಗೆದ್ದ ಶಾಸಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.

ಸಹಿ ಹಾಕಿರುವ ಶಾಸಕರು?

ಇಕ್ಬಾಲ್ ಹುಸೇನ್ – ರಾಮನಗರ
ಪಿ. ರವಿಕುಮಾರ್ ಗಣಿಗ – ಮಂಡ್ಯ
ವಿಕಾಸ್ ವೈದ್ಯ, ಸವದತ್ತಿ ಯಲ್ಲಮ್ಮ
ನಾರಾ ಭರತ್ ರೆಡ್ಡಿ – ಬಳ್ಳಾರಿ
ಕಡಲೂರು ಉದಯ್ ಕುಮಾರ್ – ಮದ್ದೂರು
ಎನ್. ಶ್ರೀನಿವಾಸ್ – ನೆಲಮಂಗಲ
ಬಿ.ಬಿ. ಚಿಮ್ಮನಕಟ್ಟಿ- ಬಾದಾಮಿ
ಬಿ. ದೇವೇಂದ್ರಪ್ಪ – ಜಗಳೂರು
ಶಿವಗಂಗಾ ಬಸವರಾಜ್ – ಚನ್ನಗಿರಿ
ಹೆಚ್‌.ವಿ. ವೆಂಕಟೇಶ್ – ಪಾವಗಡ
ಎ.ಎಸ್. ಪೊನ್ನಣ್ಣ – ವಿರಾಜಪೇಟೆ
ಅಶೋಕ್ ಕುಮಾರ್ ರೈ – ಪುತ್ತೂರು
ಡಿ ರವಿಶಂಕರ್ – ಕೆ.ಆರ್ ಪೇಟೆ
ನಯನಾಮೋಟಮ್ಮ – ಮೂಡಿಗೆರೆ
ಮಹೇಂದ್ರ ತಮ್ಮಣ್ಣನವರ್ – ಕುಡಚಿ
ಎಸಿ ಶ್ರೀನಿವಾಸ್- ಪುಲಿಕೇಶಿ ನಗರ
ಬಾಬಾ ಸಾಹೇಬ್ ಪಾಟೀಲ್, ಚನ್ನಮ್ಮನ -ಕಿತ್ತೂರು
ದರ್ಶನ್ ದ್ರುವನಾರಾಯಣ – ನಂಜನಗೂಡು
ರಾಜಾ ವೇಣುಗೋಪಾಲ್ ನಾಯಕ್- ಸುರಪುರ
ಪ್ರಕಾಶ್ ಕೋಳಿವಾಡ – ರಾಣೆಬೆನ್ನೂರು
ಆನಂದ್ ಕೆಎಸ್- ಕಡೂರು ಶಾಸಕ
ಟಿ. ಚೆನ್ನಾರೆಡ್ಡಿ ಪಾಟೀಲ್ – ಯಾದಗಿರಿ ಶಾಸಕ

Tags:
error: Content is protected !!