ತುಮಕೂರು: ಕಲ್ಪತರು ನಾಡು ತುಮಕೂರಿಗೂ ನಮ್ಮ ಮೆಟ್ರೋ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಬಗ್ಗೆ ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಂಆರ್‌ಸಿಎಲ್ ಈಗಾಗಲೇ ವರದಿ ನೀಡಿದ್ದು, ತುಮಕೂರಿಗೂ ನಮ್ಮ ಮೆಟ್ರೋ ವಿಸ್ತರಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅವಧಿಯಲ್ಲೇ ಇದನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗುತ್ತದೆ. ತುಮಕೂರಿನ ಜನರಿಗೆ ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯ ಸಿಗಬೇಕು. ಇದರಿಂದ ಇಡೀ ತುಮಕೂರಿನ ಚಿತ್ರಣವೇ ಬದಲಾಗುತ್ತದೆ. ಬೆಂಗಳೂರಿನ ನಂತರ ತುಮಕೂರು ಎರಡನೇ ನಗರವಾಗಿ ಬೆಳೆಯೋದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:- ಕಾಂಗ್ರೆಸ್ ರಕ್ತವೆಲ್ಲಾ ದೇಶ ವಿರೋಧಿ ರಕ್ತ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ





